Friday, August 7, 2026
spot_imgspot_img
spot_imgspot_img

ವಿಟ್ಲ: ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿನಿ ಮನೆಗೆ ಬೇಟಿ ನೀಡಿದ ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷರು

- Advertisement -
- Advertisement -

ವಿಟ್ಲ: 9ನೇ ತರಗತಿಯ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಅಳಿಕೆ ಗ್ರಾಮದ ಚಂದಾಡಿಯಲ್ಲಿ ನಡೆದಿದ್ದು, ಅನ್ವಿತಾಳ ಅಕಾಲಿಕ ಮರಣದ ದುಃಖದಲ್ಲಿರುವ ಮನೆಗೆ ಲಯನ್ಸ್ ಕ್ಲಬ್’ನ ಪ್ರಾಂತೀಯ ಅಧ್ಯಕ್ಷರು ಬೇಟಿ ನೀಡಿ ಹೆತ್ತವರಲ್ಲಿ ಧೈರ್ಯ ತುಂಬಿದರು.

vtv vitla
vtv vitla

ಇದ್ದ ಓರ್ವ ಪುತ್ರಿಯನ್ನು ಕಳೆದುಕೊಂಡ ಸಾವಿನ ಮನೆ ಶೋಕದ ಕಡಲಾಗಿದೆ. ಮೃತ ಅನ್ವಿತಾಳ ಪೋಷಕರಾದ ಅಳಿಕೆ ಗ್ರಾಮದ ಚಂದಾಡಿ ನಿವಾಸಿಗಳಾದ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಗಳನ್ನು ಲಯನ್ಸ್ ಕ್ಲಬ್’ನ ಪ್ರಾಂತೀಯ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ,ಮಾಜಿ ಜಿ. ಪಂ. ಸದಸ್ಯೆ ಅನಿತಾ ಹೇಮನಾಥ ಶಟ್ಟಿ, ನಿಯೋಜಿತ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್‍, ಲಯನ್ ಗಣೇಶ್ ಶೆಟ್ಟಿ, ಲಯನ್ ರವಿಪ್ರಸಾದ್ ಶೆಟ್ಟಿ, ಲಯನ್ ಜಯಪ್ರಕಾಶ್ ರೈ ಬೇಟಿ ನೀಡಿ ಧೈರ್ಯ ತುಂಬಿದರು.

- Advertisement -

Related news

error: Content is protected !!