- Advertisement -
- Advertisement -
ವಿಟ್ಲ: ಅಯೋಧ್ಯಾ ಕರಸೇವೆಯಲ್ಲಿ ಭಾಗಿಯಾದ ವಿಟ್ಲ ಭಾಗದ 3 ಜನ ಹಿರಿಯ ಕಾರ್ಯಕರ್ತರಾದ ವಿಟ್ಲ ನಗರ ಬಿಜೆಪಿ ಮಾಜಿ ಅಧ್ಯಕ್ಷ ಮೋನಪ್ಪ ಪೂಜಾರಿ, ಯಶವಂತ ಪೂಜಾರಿ, ರಾಮಚಂದ್ರ ಭಟ್ ಅವರನ್ನು ಬಿಜೆಪಿ ವಿಟ್ಲ 2 ನೇ ವಾರ್ಡ್ ಸಮಿತಿಯಿಂದ ಶಾಲು, ಹಾರ ಹಾಕಿ ಅಯೋಧ್ಯಾಧಿಪತಿ ಶ್ರೀರಾಮನ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ ವಿಟ್ಲ, ನಗರ ಬಿಜೆಪಿ ಕಾರ್ಯದರ್ಶಿ ಜಗದೀಶ್ ಪಾಣೆಮಜಲು, ನಗರ ಯುವಮೋರ್ಚಾ ಅಧ್ಯಕ್ಷ ರಾಜೇಶ್ ಬೊಬ್ಬೆಕೇರಿ, ಪುತ್ತೂರು ಗ್ರಾಮಾಂತರ ಮಂಡಲ ST ಮೋರ್ಚಾ ಅಧ್ಯಕ್ಷ ರಾಜೇಶ್ ಅನ್ನಮೂಲೆ, ಬಾಲಗೋಕುಲ ಸಮಿತಿ ಅಧ್ಯಕ್ಷ ಹರೀಶ್ ಸಿಎಚ್, ವಾರ್ಡ್ ಅಧ್ಯಕ್ಷ ಭೋಜರಾಜ ಮಣಿಯಾಣಿ, ಹಿರಿಯ ಕಾರ್ಯಕರ್ತರಾದ ರಮಾನಾಥ ದೇವಾಡಿಗ, ಜಗದೀಶ್ ಅನ್ನಮೂಲೆ, ಮುರಳಿ ಮನೋಹರ ಉಪಸ್ಥಿತರಿದ್ದರು.
- Advertisement -