Thursday, April 25, 2024
spot_imgspot_img
spot_imgspot_img

ವಿಟ್ಲ: 4 ವರ್ಷಗಳ ಹಿಂದೆ ಅಯ್ಯಪ್ಪ ಭಕ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ ಖುಲಾಸೆ; 18 ಮಂದಿ ಅಯ್ಯಪ್ಪ ಭಕ್ತರು ನಿರ್ದೋಶಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

- Advertisement -G L Acharya panikkar
- Advertisement -

ವಿಟ್ಲ: ಅನುಮತಿ ರಹಿತ ಪ್ರತಿಭಟನೆ ಮತ್ತು ಮೆರವಣಿಗೆ ಮಾಡಿದ ಆರೋಪದಡಿ ಅಯ್ಯಪ್ಪ ಭಕ್ತರ ವಿರುದ್ಧ ವಿಟ್ಲ ಠಾಣೆಯಲ್ಲಿ ದಾಖಲಾದ ಪ್ರಕರಣವು ಖುಲಾಸೆಗೊಂಡಿದೆ.

4 ವರ್ಷಗಳ ಹಿಂದೆ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿದ್ದನ್ನು ಖಂಡಿಸಿ ದೇಶಾದ್ಯಂತ ಹೋರಾಟ ಸಮಿತಿ ರಚಣೆಯಾಗಿತ್ತು, ಅದೇ ರೀತಿ ವಿಟ್ಲದಲ್ಲಿಯೂ ಹೋರಾಟ ಸಮಿತಿ ರಚಣೆಯಾಗಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು 18 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದರು. ಇಂದು ಬಂಟ್ವಾಳ ಸಿವಿಲ್ ಕೋರ್ಟ್ ನಲ್ಲಿ ಆರೋಪಿಗಳೆಲ್ಲರೂ ನೀರ್ದೋಶಿಗಳೆಂದು ತೀರ್ಪು ಪ್ರಕಟವಾಗಿದೆ.

ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ಇಂದು ನಡೆದಿದ್ದು, ಈ ದಿನವೇ ಅಯ್ಯಪ್ಪ ಭಕ್ತರಿಗೆ ಜಯ ಸಿಕ್ಕಿರುವುದು ಬಹಳ ವಿಶೇಷವಾಗಿದೆ.

ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಕಲ್ಲಡ್ಕ, ಅರುಣ್ ಕುಮಾರ್ ಪುತ್ತಿಲ, ಹೋರಾಟ ಸಮಿತಿ ಅಧ್ಯಕ್ಷರು ದಿನೇಶ್ ವಿಟ್ಲ, ಅರುಣ್ ಎಂ. ವಿಟ್ಲ, ಜಯಂತ ವಿಟ್ಲ ಪ್ರವೀಣ್ ಮತ್ತು ಇತರರು, ರವಿಶಂಕರ್, ರವಿ ಬಿ.ಕೆ., ರಾಜು ಪೂಜಾರಿ, ಕೃಷ್ಣಪ್ಪ, ಉದಯ ಕುಮಾರ್, ಅಕ್ಷಯ್ ರಜಪೂತ್ ದಯಾನಂದ ಉಜಿರೆಮಾರು, ಸಂಚಾಲಕರಾದ ರಮಾನಾಥ್ ವಿಟ್ಲ, ಜಯ ಕೊಟ್ಟಾರಿ, ಯತೀಶ್ ಪೆರುವಾಯಿ, ವರುಣ್ ರೈ, ಜಗದೀಶ್ ಪೂಜಾರಿ ಪಾನೆಮಜಲು ವಿರುದ್ಧ ದಾಖಲಾಗಿದ್ದ ಪ್ರಕರಣವು ಖುಲಾಸೆಗೊಂಡಿದೆ.

2018 ವಿಟ್ಲ ಠಾಣೆಯಲ್ಲಿ ಸರ್ಕಲ್ ಇನ್ಸೆಕ್ಟರ್ ಆಗಿದ್ದ ಟಿ.ಡಿ ನಾಗರಾಜ್ ರವರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಬಂಟ್ವಾಳ ನ್ಯಾಯಾಲಯವು ಪ್ರಕರಣವನ್ನು ಖುಲಾಸೆಗೊಳಿಸಿದೆ.

- Advertisement -

Related news

error: Content is protected !!