Thursday, April 25, 2024
spot_imgspot_img
spot_imgspot_img

ವಿಠ್ಠಲ್ ಜೇಸಿಸ್ ಪ್ರೌಢಶಾಲಾ ವಿದ್ಯಾರ್ಥಿ ಚುನಾವಣೆ

- Advertisement -G L Acharya panikkar
- Advertisement -

ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 10-06-2022 ರಂದು 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ನಾಯಕ ಮತ್ತು ಉಪ ನಾಯಕ ಸ್ಥಾನಕ್ಕೆ ಚುನಾವಣೆ ಜರಗಿತು. ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಹತ್ತನೇ ತರಗತಿಯ 5 ವಿದ್ಯಾರ್ಥಿಗಳು ಹಾಗೂ ಉಪ ನಾಯಕನ ಸ್ಥಾನಕ್ಕೆ ಏಳನೇ ತರಗತಿಯ 11 ವಿದ್ಯಾರ್ಥಿಗಳು ಪ್ರತಿನಿಧಿಸಿದ್ದರು.

ಪೂರ್ವಾಹ್ನ ನಾಮನಿರ್ದೇಶಿತ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭಾಷಣ ನಡೆಯಿತು. ಮತದಾನದ ನಿಯಮಾವಳಿಗಳನ್ನು ಸಮಾಜ ವಿಜ್ಞಾನ ಶಿಕ್ಷಕಿ ಸುಜಾತ ನಡೆಸಿಕೊಟ್ಟರು. ಸಹ ಶಿಕ್ಷಕಿ ಧನಲಕ್ಷ್ಮೀ ನಿರೂಪಿಸಿದರು. ಭಾರತದ ಸಂವಿಧಾನದ ಚುನಾವಣಾ ಪದ್ಧತಿಯಂತೆ, ಚುನಾವಣಾ ಆಯೋಗ, ಮತದಾನ ಕೇಂದ್ರ, ಗುರುತು ಚೀಟಿ, ಕೈಗೆ ಶಾಯಿ, ಮತದಾನ ಮಾಡುವ ಮೊಹರು, ಮತದಾನ ಚೀಟಿ, ಮತದಾನ ಪೆಟ್ಟಿಗೆ, , ಮತ ಎಣಿಕೆ, ಮೊದಲಾದವುಗಳನ್ನು ಶಿಕ್ಷಕರೇ ನಿರ್ವಹಿಸಿ, ಪಾರದರ್ಶಕವಾಗಿ ಮಾಡುವುದರ ಮೂಲಕ ಮತದಾನದ ಕಾರ್ಯರೂಪವನ್ನು ವಿದ್ಯಾರ್ಥಿಗಳು ಅನುಭವಿಸಿದರು.

ತೇಜಸ್ವಿ ತೆಂಕಬೈಲು , ಕಾಂಚನ ಯಶ್ ರಾಜ್

ಫಲಿತಾಂಶದಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ತೇಜಸ್ವಿ ತೆಂಕಬೈಲು ಹಾಗೂ ಉಪ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಕಾಂಚನ ಯಶ್ ರಾಜ್ ಆಯ್ಕೆಗೊಂಡರು.

ಕಾರ್ಯಕ್ರಮದಲ್ಲಿ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲೆಯರು ಮತ್ತು ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಕರಾದ ಭಾನುಪ್ರಕಾಶ್ ಶಶಿಕಲಾ ಶಿಸ್ತು ಮತ್ತು ಸಂಯಮದಿಂದ ಮತದಾನ ನಡೆಯುವಂತೆ ಸಹಕರಿಸಿದರು. ಶಿಕ್ಷಕರೆಲ್ಲರೂ ನೆರವು ನೀಡಿದರು.

- Advertisement -

Related news

error: Content is protected !!