Thursday, May 9, 2024
spot_imgspot_img
spot_imgspot_img

ವಿಠ್ಠಲ್ ಜೇಸಿ ಶಾಲಾ ಪ್ರಿ-ನರ್ಸರಿ ಕಟ್ಟಡ ಲೋಕಾರ್ಪಣೆ

- Advertisement -G L Acharya panikkar
- Advertisement -

“ಎಲ್ಲೋ ಹುದುಗಿದ ಯೋಚನೆಗಳು ರೂಪವನ್ನು ತಳೆದಾಗ ಗೋಚರವಾಗಿದ್ದು ಗೋಪುರ “. ವಿಟ್ಲ ಪರಿಸರಕ್ಕೆ ಅವಶ್ಯಕವಾಗಿತ್ತು ಈ ಯೋಚನೆ. ಅನೇಕ ಉದ್ಯೋಗಸ್ತ ದಂಪತಿಗಳಿಗೆ ನಿರಾಳ ನಿಟ್ಟುಸಿರು ಬಿಡುವಂತಾಗಲಿದೆ ಈ ವ್ಯವಸ್ಥೆ.

ವಿಟ್ಲ ಬಸವನ ಗುಡಿಯಲ್ಲಿರುವ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಿಸಿದ ಕೆಜಿ ಪೂರ್ವ ಶಿಕ್ಷಣ ವ್ಯವಸ್ಥೆಯ ಪೂರ್ವ ನರ್ಸರಿ ವಿಭಾಗ ಲೋಕಾರ್ಪಣಾ ಕಾರ್ಯಕ್ರಮ ದಿನಾಂಕ 06.06.2022ರಂದು ಪೂರ್ವಾಹ್ನ 10.00 ಗಂಟೆಗೆ ನಡೆಯಲಿದ್ದು ಸುಮಾರು 75 ಪುಟಾಣಿ ಕಂದಮ್ಮಗಳಿಗೆ ಆಸರೆ ನೀಡುವ ಸಾಮರ್ಥ್ಯ ಹೊಂದಿರುವ ಸರ್ವಅನುಕೂಲಿತ ಕಟ್ಟಡ ‘ಜೇಸಿಕುಟೀರ’ ಕಾರ್ಯಾಚರಿಸಲಿದೆ. ಸರಕಾರದ ಹೊಸ ಶಿಕ್ಷಣ ನೀತಿಯ ಸಿದ್ಧತೆಯಂತೆ ಮಕ್ಕಳ ಭವಿಷ್ಯದ ಅಡಿಗಲ್ಲಾಗಿ ರೂಪಿಸಲಾಗಿದೆ.

ವೈಶಿಷ್ಟಗಳು :- ಸುಂದರ ನೈಸರ್ಗಿಕತೆಯ ಮಧ್ಯದಲ್ಲಿ ಗುರುಕುಲ ಕುಟೀರ ಮಾದರಿಯ ಕಟ್ಟಡ, ಸುಮಾರು 3000 sq.mtr ವಿಸ್ತೀರ್ಣ ಹೊಂದಿದ ವಿಶಾಲ ಹಾಲ್ ನಲ್ಲಿ ಮಗುವಿಗೆ ಸಂತಸ ಕೊಡುವ ಆಧುನಿಕ ಮಾದರಿಯ ಸೈಕಲ್ಲುಗಳು, ಪ್ಲೇ ಸ್ಟೇಷನ್ ಮುಂತಾದ ಒಳಾಂಗಣ ಆಟದ ಸಾಮಗ್ರಿಗಳು, ಪುಷ್ಟಿದಾಯಕ ಆಹಾರ, ಶುದ್ಧ ನೀರು ಒದಗಿಸಲು ಬೇಕಾದ ಆಧುನಿಕ ಅಡುಗೆಕೋಣೆ, ಪುಟಾಣಿಗಳ ವಿಶ್ರಾಂತಿ ಕೊಠಡಿ, ಕಟ್ಟಡದೊಳಗೆ ಸ್ವಾಭಾವಿಕ ಗಾಳಿಯಾಡುವಂತೆ ಮೇಲಣ ಕಿಂಡಿ, ವಿಶಾಲ ಕಿಟಿಕಿ ಹಾಗೂ ಸರ್ವ ಕಾಲಕ್ಕೂ ತಂಪನ್ನೀಯುವ ಡಬಲ್ ಟೈಲ್ಡ್ ಚಾವಣಿ ಹೊಂದಿದೆ.

ಪುಟಾಣಿಗಳ ನಲಿ-ಕಲಿಕೆಗೆ ಬೇಕಾದ ಆಕರ್ಷಕ ಚಿತ್ರಪಟಗಳನ್ನು ಅಳವಡಿಸಲಾಗಿದೆ. ಮಗುವಿನ ಮೆದುಳಿನ ಚುರುಕಿಗಾಗಿ ಆಕ್ವೇರಿಯಂ, ಹಕ್ಕಿಗಳ ಚಿಲಿಪಿಲಿಗಾಗಿ ಹಕ್ಕಿಗೂಡು ಹಾಗೂ ಇಂಡೋರ್ ಪ್ಲಾಂಟ್ ಗಳನ್ನು ಇರಿಸಲಾಗಿದೆ. ಹೊರಭಾಗದಲ್ಲಿ ಪುರಾತನ ಶೈಲಿಯ ಕಂಬಗಳ ವಿಶಾಲ ಜಗಲಿ, ಪ್ರತ್ಯೇಕ ಕಚೇರಿ, ಪಾರ್ಕಿಂಗ್ ವ್ಯವಸ್ಥೆ, ಹೋರಾಂಗಣ ಆಧುನಿಕ ಆಟದ ಮೈದಾನ, ಉದ್ಯಾನ ಹೊಂದಿದೆ. ಮಕ್ಕಳಿಗೆ ನೀರಿನ ಆಟದ ವ್ಯವಸ್ಥೆಯನ್ನು ಅಳವಡಿಸಿ ಬಾಲ ಮನಸ್ಸಿಗೆ ಸಂತಸ ಕೊಡಿಸುವ ಪ್ರಯತ್ನ ಮಾಡಲಾಗಿದೆ.


ನುರಿತ ನರ್ಸರಿ ತರಬೇತಿ ಹೊಂದಿದ ಶಿಕ್ಷಕಿ, ಸಹಾಯಕರನ್ನು ಹೊಂದಿಕೊಂಡು ವರ್ಷದ ಯಾವುದೇ ದಿನಗಳಲ್ಲಿ (ಸೇರ್ಪಡೆಗೆ ಅಂತಿಮ ದಿನಾಂಕವಿಲ್ಲದೆ )ಸೇರ್ಪಡೆಗೊಳಿಸುವ ಅವಕಾಶ ಕಲ್ಪಿಸಲಾಗಿದೆ. ನಿಯಮಿತ ತಿಂಗಳ ಶುಲ್ಕ 1,200/- ಯಾ ವಾರ್ಷಿಕ 10,000/- ಶುಲ್ಕ ದೊಂದಿಗೆ 2022-23ಕ್ಕೆ ಪ್ರವೇಶ ಆರಂಭಗೊಂಡಿರುವುದು ಉದ್ಯೋಗಸ್ತ ದಂಪತಿಗಳಿಗೆ ಅನುಕೂಲವಾಗಲಿದೆ.

ಕೇವಲ 49 ದಿನಗಳಲ್ಲಿ ಪೂರ್ಣ ಕಾಮಗಾರಿಯನ್ನು ಮಾಡಿಕೊಟ್ಟ ಕೀರ್ತಿ ಇಂಜಿನಿಯರ್ ಲಯನ್ ಸಂತೋಷ್ ಕುಮಾರ್ ಶೆಟ್ಟಿ ಪೆಲತಡ್ಕ ಇವರ ಶ್ರದ್ದಾಪೂರ್ವಕ ಶ್ರಮಕ್ಕೆ ಸಂಸ್ಥೆ ಆಭಾರಿಯಾಗಿದೆ. ಕಟ್ಟಡದ ಲೋಕಾರ್ಪಣೆಯು ದಿನಾಂಕ 06.06.2022 ರಂದು ಕಮಲಮ್ಮ ಕೂಡೂರ್ ರವರಿಂದ ಉದ್ಘಾಟನೆಗೊಂಡು, ಅತಿಥಿಗಳಾಗಿ ವಲಯ 15ರ ವಲಯಾಧ್ಯಕ್ಷ ಜೇಸಿ ಸೇನ್ ರಾಯನ್ ಉದಯ ಕ್ರಾಸ್ಥ, ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ವಿ. ಕೆ, ಹಾಗೂ ಹಿರಿಯ ವಿದ್ಯಾರ್ಥಿನಿ ಆರ್ಶಿಯ ತನು ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎಲ್ಲ ಹಿರಿಯ ವಿದ್ಯಾರ್ಥಿಗಳನ್ನು, ಹೆತ್ತವರನ್ನು, ವಿದ್ಯಾಭಿಮಾನಿಗಳನ್ನು, ವಿಟ್ಲ ಜೇಸಿ, ರೋಟರಿ, ಲಯನ್ ಇದರ ಸರ್ವ ಸದಸ್ಯರನ್ನು, ಜೇಸಿ ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ ಅಭಿಮಾನಿ ವರ್ಗ, ವರದಿಗಾರರನ್ನು ಹಾಗೂ ಸರ್ವರನ್ನು ಪ್ರೀತಿಪೂರ್ವಕವಾಗಿ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ವರ್ಗ ಆಮಂತ್ರಿಸಲಾಗಿದೆ.

vtv vitla
- Advertisement -

Related news

error: Content is protected !!