Thursday, May 16, 2024
spot_imgspot_img
spot_imgspot_img

ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿದ್ದ ಕಾಡಾನೆಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ; ಪ್ರಧಾನಿ ಮೆಚ್ಚುಗೆ

- Advertisement -G L Acharya panikkar
- Advertisement -

ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿದ್ದ ಕಾಡಾನೆಯೊಂದನ್ನು ಬಂಡೀ​ಪು​ರದ ಅರಣ್ಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ಬದುಕುಳಿಸಿದ್ದು, ಅರಣ್ಯ ಸಿಬ್ಬಂದಿಯ ಈ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಂಡೀ​ಪುರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ​ವನ್ನು ಶ್ಲಾಘಿಸಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿದ್ದರು. ಅರಣ್ಯ ಸಚಿವರ ಈ ಟ್ವೀಟ್ ಅನ್ನು ಶನಿವಾರ ಬೆಳಗ್ಗೆ ಪ್ರಧಾನಿ ಮೋದಿ ಅವ​ರು ಮರು ಟ್ವೀಟ್ ಮಾಡಿ, ವಿದ್ಯುತ್ ಶಾಕ್‌ನಿಂದ ಆನೆ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆಯನ್ನೂ ವ್ಯಕ್ತ​ಪ​ಡಿಸಿ​ದ್ದಾ​ರೆ. ಇದನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ.ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗೆ ನನ್ನ ಅಭಿನಂದನೆಗಳು.

ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ. ಓಂಕಾರ್ ಅರಣ್ಯ ವಲಯ ಬರಗಿ ಸಮೀಪದ ಪುತ್ತನಪುರ ರಾಜು ಎಂಬುವವರ ಜಮೀನಿನಲ್ಲಿ ಫೆ.14ರಂದು ಸುಮಾರು 25 ವರ್ಷದ ಹೆಣ್ಣಾನೆಗೆ ವಿದ್ಯುತ್ ತಗುಲಿ ನಿತ್ರಾಣಗೊಂಡು ನರಳಾಡುತ್ತಿತ್ತು. ನಂತರ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಹಾಗೂ ಇಲಾಖೆ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ನೀಡಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಆನೆ ಚೇತರಿಸಿಕೊಳ್ಳುವಂತೆ ಮಾಡಿದ್ದರು. ನಂತರ ಸಂಜೆ ವೇಳೆಗೆ ಆನೆ ಸುಧಾರಿಸಿಕೊಂಡು ಕಾಡಿನತ್ತ ತೆರಳಿತು.

ಘಟನೆಯ ವಿಡಿಯೋ ಹಾಗೂ ಪೋಟೋವನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಕ್ಷಿಪ್ರ ಪ್ರಯತ್ನದಿಂದ ವಿದ್ಯುತ್ ತಗುಲಿ ನಿತ್ರಾಣಗೊಡಿದ್ದ ಆನೆಯ ಜೀವವನ್ನು ಉಳಿಸಿರುವುದು ಸಂತಸ ತಂದಿದೆ. ಆನೆಯನ್ನು ಕಾಡಿಗೆ ಬಿಡಲಾಗಿದ್ದು, ಅದರ ಮೇಲೆ ನಿಗಾ ಇಡಲಾಗಿದೆ. ನಮ್ಮ ಅರಣ್ಯದ ಮುಂಚೂಣಿ ನೌಕರರು ನಮ್ಮ ಹೆಮ್ಮೆ ಎಂದು ಹೇಳಿದ್ದರು.

- Advertisement -

Related news

error: Content is protected !!