Sunday, June 14, 2026
spot_imgspot_img
spot_imgspot_img

ವಿರಾಟ್ ಕೊಹ್ಲಿ ಅಚ್ಚರಿ ನಿರ್ಧಾರ, ನಾಯಕತ್ವಕ್ಕೆ ವಿದಾಯ ಘೋಷಣೆ

- Advertisement -
- Advertisement -

ವಿರಾಟ್ ಕೊಹ್ಲಿ ಟಿ 20 ತಂಡದ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದು, ರಾಜೀನಾಮೆ ಕುರಿತು ಟ್ವಿಟರ್‌ಲ್ಲಿ ಮಾಹಿತಿ ನೀಡಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ವಿಶ್ವಕಪ್ ಮುಗಿದ ನಂತರ ನಾಯಕತ್ವ ತ್ಯಜಿಸಲಿದ್ದಾರೆ ಎನ್ನಲಾಗಿದೆ. ಟಿ20ಯಲ್ಲಿ 45 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಕಾರ್ಯನಿರ್ವಹಿಸಿದ್ದು, 27 ಪಂದ್ಯಗಳಲ್ಲಿ ಗೆಲುವು ದೊರೆತಿದೆ. 14 ಪಂದ್ಯಗಳಲ್ಲಿ ಸೋಲಾಗಿದೆ.

ದುಬೈನಲ್ಲಿ ಟಿ 20 ವಿಶ್ವಕಪ್ ನಂತರ ತಂಡದ ಟಿ 20 ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.

- Advertisement -

Related news

error: Content is protected !!