Friday, April 19, 2024
spot_imgspot_img
spot_imgspot_img

ವಿವಾದ ಸೃಷ್ಟಿಸಿದ್ದ ಬಸ್‌ ನಿಲ್ದಾಣ; ಗುಂಬಜ್‌ ಮಾದರಿಯ ಗೋಪುರ ತೆರವು

- Advertisement -G L Acharya panikkar
- Advertisement -

ಮೈಸೂರು: ವಿವಾದಿತ ಗುಂಬಜ್ ಬಸ್ ನಿಲ್ದಾಣ ವಿಚಾರ ಸಂಬಂಧ ಇದೀಗ ಶೆಲ್ಟರ್ ನಲ್ಲಿದ್ದ ಮೂರು ಗೋಪುರದಲ್ಲಿ 2 ಚಿಕ್ಕ ಗೋಪುರ ತೆರವುಗೊಳಿಸಲಾಗಿದೆ.

ಅರಮನೆ ಮಾದರಿ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಆದರೆ ಅನಾವಶ್ಯಕ ಧರ್ಮದ ಲೇಪನ ನೀಡಿದ್ದು, ನನಗೆ ನೋವಾಗಿದೆ. ಹೀಗಾಗಿ ವಿವಾದಿತ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ ಬದಿಯಲ್ಲಿರುವ ಎರಡು ಗೋಪುರಗಳನ್ನು ತೆರವುಗೊಳಿಸಿದ್ದು, ಮಧ್ಯದ ಒಂದು ಗೋಪುರವನ್ನು ಉಳಿಸಿಕೊಳ್ಳಲು ಒಪ್ಪಿಗೆ ಪಡೆಯಲಾಗಿದೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಗೋಪುರ ತೆರವುಗೊಳಿಸಿರುವುದಾಗಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನ ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು. ಆ ಬಳಿಕ ಬಸ್ ನಿಲ್ದಾಣಕ್ಕೆ ರಾತ್ರೋ, ರಾತ್ರಿ ಜೆಎಸ್‍ಎಸ್ ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿತ್ತು. ಅಲ್ಲದೇ ಫಲಕದ ಒಂದು ಬದಿಯಲ್ಲಿ ಸುತ್ತೂರು ಆದಿ ಜಗದ್ಗುರುಗಳ ಹಾಗೂ ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿತ್ತು. ಮತ್ತೊಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋವನ್ನು ಹಾಕಲಾಗಿತ್ತು.

vtv vitla
- Advertisement -

Related news

error: Content is protected !!