Monday, June 8, 2026
spot_imgspot_img
spot_imgspot_img

ಬ್ರಹ್ಮಾವರ : ಒಂದೇ ದಿನ ಸಂಗೀತ ಸ್ವರ ನಿಲ್ಲಿಸಿದ ಸಹೋದರರು…!!

- Advertisement -
- Advertisement -

ಬ್ರಹ್ಮಾವರ : ಇಲ್ಲಿನ ಹೆಸರಾಂತ ಸ್ಯಾಕ್ಸೋಫೋನ್ ವಾದಕ ಸಹೋದರರಿಬ್ಬರು ಒಂದೇ ದಿನ ಇಹಲೋಕ ತ್ಯಜಿಸಿದ ಘಟನೆ ನಡೆದಿದೆ.

ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರ ರಾಜ್ಯವಾದ ಕೇರಳ, ತಮಿಳುನಾಡು ಸಹಿತ ಅನೇಕ ಕಡೆಗಳಲ್ಲಿ ಸ್ಯಾಕ್ಸೋಫೋನ್ ವಾದಕ ನಡೆಸಿಕೊಟ್ಟಿರುವ ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ದೇವಾಡಿಗರ ಬೆಟ್ಟುವಿನ ಗಣೇಶ ದೇವಾಡಿಗ(51) ಹಾಗೂ ಅವರ ಸಹೋದರ ರಾಘವೇಂದ್ರ ಯಾನೆ ಮೋಹನ ದೇವಾಡಿಗ (42 ) ಮೃತ ಪಟ್ಟವರು.

ಗಣೇಶ ದೇವಾಡಿಗ ಇವರು ಕಿಡ್ನಿ ವೈಫಲ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಅವರ ಸಹೋದರ ರಾಘವೇಂದ್ರ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗಣೇಶ ದೇವಾಡಿಗ ಅವರು ಪತ್ನಿ , ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ರಾಘವೇಂದ್ರ ಅವರು ಪತ್ನಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!