Saturday, April 27, 2024
spot_imgspot_img
spot_imgspot_img

ವಿವಾಹಿತೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..! ಗಂಡನೇ ಕೊಲೆಗೈದಿರುವುದಾಗಿ ಶಂಕೆ

- Advertisement -G L Acharya panikkar
- Advertisement -

ವಿವಾಹಿತ ಯುವತಿಯೋರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಗಂಡನೇ ಹೆಂಡತಿಯನ್ನು ಕೊಲೆಗೈದು ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಬೆಂಗಳೂರಿನ ರಾಜಧಾನಿಯ ದೀಪಾಂಜಲಿ ನಗರದಲ್ಲಿ ಘಟನೆ ನಡೆದಿದೆ.

ಸೈಫ್‌ ಆಲಿ ಎಂಬಾತನ ಪತ್ನಿ ಝೈದಾ(22) ಮೃತ ಮಹಿಳೆ. ಮೂರು ವರ್ಷಗಳ ಹಿಂದೆ ಸೈಫ್ ಅಲಿ ಮತ್ತು ಝೈದಾ ಮದುವೆ ನಡೆದಿತ್ತು. ಝೈದಾ ಅವರ ಶವ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಝೈದಾ ಅವರ ಕೈಯನ್ನು ಕೊಯ್ದು ರಕ್ತ ಹರಿದು ಹೋಗಿದೆ. ಗಂಡ ಸೈಪ್‌ ಅಲಿಯೇ ಕೈಯನ್ನು ಕೊಯ್ದು ಕೊಲೆ ಮಾಡಲು ಪ್ರಯತ್ನಿಸಿ ಬಳಿಕ ನೇಣಿಗೆ ಹಾಕಿದ್ದಾನೆ ಎಂದು ಹೆತ್ತವರು ಆರೋಪಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪತಿ ಸೈಫ್‌ ಅಲಿ ವಿರುದ್ದ ಕೇಸು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!