Saturday, April 20, 2024
spot_imgspot_img
spot_imgspot_img

ಬಂಟ್ವಾಳ: ಹೆಂಡತಿಯಿಂದಲೇ ಗಂಡನ ಕೊಲೆ – ಮಹಿಳೆಯನ್ನು ವಶಕ್ಕೆ ಪಡೆದ ಬಂಟ್ವಾಳ ಪೊಲೀಸರು !

- Advertisement -G L Acharya panikkar
- Advertisement -

ಬಂಟ್ವಾಳ: ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದಲ್ಲಿ ನಡೆದಿದೆ. ನಾವೂರ ಗ್ರಾಮದ ಸೂರ ಕ್ವಾಟ್ರಸ್ ನಿವಾಸಿ ಸೇಸಪ್ಪ ಪೂಜಾರಿ (60) ಮೃತಪಟ್ಟ ವ್ಯಕ್ತಿ. ಕೊಲೆ ಆರೋಪದಡಿ ಸೇಸಪ್ಪ ಅವರ ಪತ್ನಿ ಉಮಾವತಿ (52) ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನಾವೂರ ಗ್ರಾಮದ ಸೂರ ಕ್ವಾಟ್ರಸ್ ನಿವಾಸಿ ಸೇಸಪ್ಪ ಕೂಲಿ ಕೆಲಸ ಮಾಡುತ್ತಿದ್ದು ದಿನಾ ಮನೆಯಲ್ಲಿ ಗಂಡ- ಹೆಂಡತಿ ಮಧ್ಯೆ ಕುಡಿದು ಗಲಾಟೆ ನಡೆಯುತ್ತಿತ್ತು. ರಾತ್ರಿ ಗಂಡ ಹೆಂಡತಿ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆ ಜೋರಾಗಿ ಹೊಡೆದಾಟದ ಹಂತಕ್ಕೆ ತಲುಪಿದ್ದು ಹೆಂಡತಿ ಮನೆಯಲ್ಲಿ ಇದ್ದ ಕತ್ತಿಯಿಂದ ಗಂಡನಿಗೆ ಹೊಡೆದಿದ್ದರು.

ಇದರಿಂದ ಸೇಸಪ್ಪ ಅವರ ಬಲ ಹಣೆಗೆ ಗಾಯವಾಗಿದ್ದು ಮಗಳು ಇವರ ಜಗಳ ಬಿಡಿಸಿದ್ದಳು. ಬಳಿಕ ಗಾಯವಾಗಿ ರಕ್ತ ಬಂದರೂ ಚಿಕಿತ್ಸೆ ಪಡೆಯದೆ ಮನೆಯಲ್ಲಿಯೇ ಉಳಿದಿದ್ದರು. ರಕ್ತಸ್ರಾವ ಆಗಿದ್ದರಿಂದ ಹುಷಾರಿಲ್ಲ ಎಂದು ಮಲಗಿದ್ದಲ್ಲಿಯೇ ಇದ್ದು ಮಾ.5 ರಂದು ಸಂಜೆ ಅವರು ಮೃತಪಟ್ಟಿದ್ದಾರೆ.

ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ಉಮಾವತಿ ಅವರನ್ನು ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಎಸ್ಐ ಪ್ರಸನ್ನ ಅವರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!