Monday, May 13, 2024
spot_imgspot_img
spot_imgspot_img

ವಿಶ್ವದ ಅತೀ ದೊಡ್ಡದೆನ್ನಲಾದ ಆಮೆ ಪಯಸ್ವಿನಿ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

- Advertisement -G L Acharya panikkar
- Advertisement -

ಕಾಸರಗೋಡು : ವಿಶ್ವದಲ್ಲೇ ಅತೀ ದೊಡ್ಡದೆನ್ನಲಾದ ಆಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಕಾಸರಗೋಡಿನ ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಬಾವಿಕ್ಕರೆ ಸಮೀಪದ ಅಣೆಕಟ್ಟಿನ ಬದಿಯಲ್ಲಿ ಆಮೆ ಪತ್ತೆಯಾಗಿದ್ದು , ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಆಮೆಯು ಒಂದು ಮೀಟರ್ ಉದ್ದ 62 ಸೆ. ಮೀ ಅಗಲ ಹೊಂದಿದೆ. ಈ ಹೆಣ್ಣು ಆಮೆ 40 ಕಿಲೋ ಭಾರ ಹೊಂದಿದೆ. ಹತ್ತು ವರ್ಷ ಪ್ರಾಯವನ್ನು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸಿಹಿ ನೀರಿನಲ್ಲಿ ಈ ಆಮೆ ಕಂಡು ಬರುತ್ತಿದ್ದು , 2010 ರಲ್ಲಿ ಕೋಜಿಕ್ಕೋಡ್ ಕುಟ್ಯಾಡಿ ಹೊಳೆಯಲ್ಲಿ ಇಂತಹ ಆಮೆ ಕಂಡು ಬಂದಿತ್ತು. ಇದಾದ ಬಳಿಕ ಪಯಸ್ವಿನಿ ಹೊಳೆಯಲ್ಲಿ ಈ ಅಪರೂಪದ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

vtv vitla
vtv vitla
- Advertisement -

Related news

error: Content is protected !!