Friday, May 3, 2024
spot_imgspot_img
spot_imgspot_img

ವಿಶ್ವವಿದ್ಯಾಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

- Advertisement -G L Acharya panikkar
- Advertisement -

ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಮೂಲಗಳು ತಿಳಿಸಿದೆ.

ಬೆಂಗಳೂರಿನ ನಿವಾಸಿ ವಾಣಿ(23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸ್ಥಳಕ್ಕೆ ಆಗಮಿಸಿದ ವಿವಿ ಪುರಂ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ವಿದ್ಯಾರ್ಥಿನಿ ವಾಣಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಶ್ವೇಶ್ವರಯ್ಯಪುರ ಕಾಲೇಜ್ ಆಫ್ ಲಾ ಸಂಸ್ಥೆಯಲ್ಲಿ ಕಾನೂನು ಪದವಿ ವ್ಯಾಸಾಂಗ ಮಾಡುತ್ತಿದ್ದ ವಾಣಿ ಬೆಂಗಳೂರಿನ ತಾಂತ್ರಿಕ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನ.24 ರಿಂದ ಪ್ರಥಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿತ್ತು. ನಿತ್ಯ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿನಿ ವಾಣಿ, ಇಂದು ಗೈರಾಗಿದ್ದಳು. ಅಲ್ಲದೆ ಒಂದು ಪುಟದ ಪೂರ್ತಿ ಡೆತ್ ನೋಟು ಬರೆದಿಟ್ಟು ತಾಂತ್ರಿಕ ವಿಶ್ವವಿದ್ಯಾಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

- Advertisement -

Related news

error: Content is protected !!