Sunday, June 14, 2026
spot_imgspot_img
spot_imgspot_img

ವೀರಕಂಭ: ಉಚಿತ ಪೂಟ್ ಥೇರೆಪಿ ಶಿಬಿರ

- Advertisement -
- Advertisement -

ವಿಟ್ಲ: ವೀರಕಂಭ ಗ್ರಾಮ ಪಂಚಾಯತ್, ಮಾತೃಶ್ರೀ ಗೆಳೆಯರ ಬಳಗ ವೀರಕಂಬ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರಾಥಮಿಕ ಶಾಲೆ ಮಜಿ ಹಾಗೂ ಕಂಪಾನಿಯೋ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಪೂಟ್ ಥೇರೆಪಿ ಶಿಬಿರ ವೀರಕಂಭ ಗ್ರಾಮ ಪಂಚಾಯತಿನ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪೂಟ್ ಥೇರೆಪಿ ನಿಂದ ಆಗುವ ಪ್ರಯೋಜನಗಳ ಬಗ್ಗೆ ಕಂಪೆನಿಯೋ ಇದರ ಮಂಗಳೂರು ವಿಭಾಗದ ಮುಖ್ಯಸ್ಥರಾದ ಶ್ರೀಧರ್ ಪೂಜಾರಿ ಸವಿವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೀಲಾ ನಿರ್ಮಲ ವೇಗಸ್, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಉಮಾವತಿ ದಾಮೋದರ್, ಸಂದೀಪ್ ಪೂಜಾರಿ, ಜಯಪ್ರಸಾದ್, ರಹಿಮಾನ್, ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಪ್ರಕಾಶ್ ಪೂಜಾರಿ , ಕೇಶವ ನಾಯಕ ಕೆಮ್ಮಟೆ, ದಿನೇಶ್ ಆಚಾರ್ಯ, ಸೀಮಾ ಮಾಧವ್, ತೇಜಾಕ್ಷ ಮಲ್ಲಿಗೆ ಮೊದಲಾದವರು ಉಪಸ್ಥಿತರಿದ್ದರು.
ಕಂಪೆನಿಯೋ ಇದರ ಸಹಾಯಕ ಸಿಬ್ಬಂದಿಗಳಾದ ಸುನಿತಾ ಹಾಗೂ ಸೌಜನ್ಯ ಥೇರೆಪಿ ಕಾರ್ಯಕ್ರಮ ನಡೆಸಿಕೊಟ್ಟರು.

- Advertisement -

Related news

error: Content is protected !!