Sunday, April 28, 2024
spot_imgspot_img
spot_imgspot_img

ವೀರಕಂಭ: ಗ್ರಾಮಸ್ಥರ ಕುಡಿಯುವ ನೀರಿಗೆ ಕತ್ತರಿ ಹಾಕಿದ ಗುತ್ತಿಗೆದಾರ ನಾಗರಾಜ..!!

- Advertisement -G L Acharya panikkar
- Advertisement -

ಕೆಲಿಂಜ ಜಾತ್ರೋತ್ಸವದಂದು ಪಂ.ನ 3ಮತ್ತು 4ನೇ ವಾರ್ಡಿನಲ್ಲಿ ಎರಡು ದಿನಗಳಿಂದ ನೀರಿಲ್ಲದೇ ಜನರ ಪರದಾಟ.!

ವಿಟ್ಲ : ಪ್ರತಿನಿತ್ಯ ಕುಡಿಯುವ ನೀರು ಪೂರೈಸಬೇಕಾಗಿದ್ದ ವಾಟರ್ ಮ್ಯಾನ್ ಗುತ್ತಿಗೆದಾರನೊಬ್ಬನ ಮಾತಿನಂತೆ ವೀರಕಂಭ ಪಂ.ನ ಮೂರು ಮತ್ತು ನಾಲ್ಕನೇ ವಾರ್ಡಿಗೆ ನೀರು ಸರಬರಾಜು ಮಾಡದೇ ಜನರನ್ನು ಪರದಾಡುವಂತೆ ಮಾಡಿದ್ದಾನೆ. ಕಾಂಕ್ರೀಟ್ ಟ್ಯಾಂಕ್ ನಿರ್ಮಾಣದ ಗುತ್ತಿಗೆದಾರನೊಬ್ಬನ ಅವಿವೇಕತನದಿಂದಾಗಿ ಜನ ನೀರಿಲ್ಲದೇ ನರಳಾಡುವಂತಾಗಿದೆ. ಈ ಬಗ್ಗೆ ವಾಟರ್ ಮಾನ್ ಜೊತೆ ವಿಚಾರಿಸಿದಾಗ ಗುತ್ತಿಗೆದಾರರು ಹಳೆಯ ಟ್ಯಾಂಕ್ ಗೆ ಪಂಪ್ ಹಾಕಿ ನೀರು ತೆಗೆದುಕೊಂಡು ಹೋಗುತ್ತಿರುವ ಕಾರಣ ಜನರಿಗೆ ಸರಬರಾಜು ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಉತ್ತರಿಸಿದ್ದಾರೆ. ಈ ಬಗ್ಗೆ ಗ್ರಾಮಸ್ತರು ಗುತ್ತಿಗೆದಾರನಲ್ಲಿ ವಿಚಾರಿಸಿದಾಗ ಉಢಾಫೆಯಿಂದ ವರ್ತಿಸಿದ್ದಲ್ಲದೇ ನೀವ್ಯಾರು ಕೇಳೋಕೆ, ನನ್ನಿಷ್ಟದಂತೆ ನಾನು ಮಾಡ್ತೇನೆ ಎಂಬ ಉದ್ದಟತನ ತೋರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಧ್ಯಮ ಪ್ರತಿನಿಧಿಯೊಬ್ಬರು ವಿಚಾರಿಸಿದಾಗ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ.

ಗುತ್ತಿಗೆ ಪಡೆದಿರುವ ನಾಗರಾಜ ಎರ್ಮೆಮಜಲ್ ತನ್ನ ಚಾಳಿ ಬುದ್ಧಿಯನ್ನು ತೋರಿಸಿ ಮಾಡಿದ ಮಹಾ ಕಾರ್ಯ ವೇನೆಂದರೆ ಹಳೆಯ ಪಂಚಾಯತ್ ಟ್ಯಾಂಕ್ ಗೆ ಶೇಖರಣೆಯಾದ ನೀರನ್ನು ತನ್ನ ಸ್ವಂತ ಪಂಪ್ ಬಳಸಿ ಪಂಚಾಯತ್ ನ ಅನುಮತಿ ಇಲ್ಲದೆ ಗ್ರಾಮಸ್ಥರಿಗೆ ಸರಬರಾಜಗುವ ನೀರನ್ನು ತನ್ನ ಗುತ್ತಿಗೆ ಪಡೆದ ಕೆಲಸಕ್ಕೆ ಉಪಯೋಗಿಸಿದ್ದಾನೆ.

ಈ ಬಗ್ಗೆ ಸಾರ್ವಜನಿಕರು ನಾಗರಾಜನಿಗೆ ತರಾಟೆಗೆ ತೆಗೆದುಕೊಂಡು ಊರವರ ನೀರಿನಲ್ಲಿ ನಿನ್ನ ಹೆಂಡತಿ ಮಕ್ಕಳನ್ನು ಯಾಕೆ ಸಾಕುತ್ತೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗುತ್ತಿಗೆ ಪಡೆದ ನಂತರ ಅವರೇ ನೀರಿನ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರ ನೀರನ್ನು ದುರುಪಯೋಗ ಮಾಡಿದ ನಾಗರಾಜನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದ್ದಾರೆ

ವೀರಕಂಭ ಗ್ರಾಮದಲ್ಲಿ ಕಾಲಾವಧಿ ಕೆಲಿಂಜ ಜಾತ್ರೋತ್ಸವದ ವಿಜೃಂಭಣೆಯಲ್ಲಿರುವ ಗ್ರಾಮಸ್ಥರು ಜಾತ್ರ ಸಂದರ್ಭದಲ್ಲಿ ನೀರಿಲ್ಲದಂತೆ ಮಾಡಿದ ಗುತ್ತಿಗೆದಾರ ನಾಗರಾಜ ಎರ್ಮೆಮಜಲ್ ಎಂಬವನಿಗೆ ಚೀಮಾರಿ ಹಾಕಿದ್ದಾರೆ.ಇನ್ನು ಗುತ್ತಿಗೆದಾರನ ಈ ಕೆಲಸದಿಂದ ಗ್ರಾಮಸ್ಥರು ನೀರನ್ನು ಹಣಕ್ಕೆ ತರುವಂತಾಗಿದೆ.

- Advertisement -

Related news

error: Content is protected !!