Sunday, May 5, 2024
spot_imgspot_img
spot_imgspot_img

ಜೋಳದ ರೊಟ್ಟಿ ಮಾಡುವ ವಿಧಾನ ಮತ್ತು ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -

ದಕ್ಷಿಣ ಕರ್ನಾಟಕದ ಮಂದಿಗೆ ರಾಗಿ ಹೇಗೋ ಉತ್ತರ ಕರ್ನಾಟಕದ ಮಂದಿಗೆ ಜೋಳ. ಉತ್ತರ ಕರ್ನಾಟಕದ ಮಂದಿಗೆ ಜೋಳ ಎಂದರೆ ಪ್ರಾಣ. ಜೋಳದಲ್ಲಿ ಮಾಡಿದ ರೊಟ್ಟಿ, ಬಕ್ರಿ ಜತೆ ಚಟ್ನಿಪುಡಿ, , ಎಣ್ಣೆಗಾಯಿ ಇದ್ದರಂತೂ ಸ್ವರ್ಗವೇ ಸಿಕ್ಕಂತೆ.

ಇತ್ತೀಚೆಗೆ ದಕ್ಷಿಣ ಕರ್ನಾಟಕ ಭಾಗದಲ್ಲೂ ಜೋಳದ ರೊಟ್ಟಿ ಖ್ಯಾತಿ ಪಡೆಯುತ್ತಿದೆ. ಜೋಳದ ರೊಟ್ಟಿ ತಿನ್ನಲು ಎಷ್ಟು ಸೊಗಸೋ ಮಾಡುವುದೂ ಅಷ್ಟೇ ಸುಲಭ. ಜೋಳದ ರೊಟ್ಟಿ ಮಾಡುವ ವಿಧಾನ…

ಬೇಕಾಗುವ ಪದಾರ್ಥ : 3 ಕಪ್‌ ಜೋಳದ ಹಿಟ್ಟು. 100 ಗ್ರಾಂನಷ್ಟು ಎಳ್ಳು, ರುಚಿಗೆ ಬೇಕಾದಷ್ಟು ಹದವಾಗಿ ಉಪ್ಪು, ಇಂಗು, ಅಚ್ಚ ಮೆಣಸಿನಪುಡಿ ಹಾಗೂ ಒಂದು ಕಪ್‌ ಎಣ್ಣೆ.

ಮಾಡುವವಿಧಾನ :ಅಗಲವಾದ ಬಾಯಿಯ ಪಾತ್ರೆಗೆ ಮೊದಲು ಜೋಳದ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ 1 ಕಪ್‌ ಬಿಸಿ ನೀರು ಹಾಕಿ ಒಂದರ್ಧ ಗಂಟೆ ಬಿಡಿ. ಹಿಟ್ಟು ಚೆನ್ನಾಗಿ ನೆನೆಯುತ್ತದೆ. ಆನಂತರ ಹುರಿದ ಎಳ್ಳು, ಉಪ್ಪು, ಖಾರ ಬೆರೆಸಿ. ಚಪಾತಿ ಹಿಟ್ಟಿನ ರೀತಿ ಹದವಾಗಿ ಕಲೆಸಿ. ಇದಕ್ಕೆ ಸ್ವಲ್ಪ ಎಣ್ಣೆ ಬೆರೆಸಿ ಚೆನ್ನಾಗಿ ನಾದಿಟ್ಟುಕೊಳ್ಳಿ.

ಒಂದು ಗಂಟೆ ಕಳೆದ ಬಳಿಕ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಚಪಾತಿ ಮಣೆಯ ಮೇಲೆ ತುಸು ಹಿಟ್ಟು ಹಾಕಿ ಚಪಾತಿಯಂತೆಯೇ ಹಾಳೆಗಳನ್ನು ತಯಾರಿಸಿ. ಒಲೆಯ ಮೇಲೆ ಕಾವಲಿ ಇಟ್ಟು ಹಿಟ್ಟಿನ ಹಾಳೆಯನ್ನು ಹಾಕಿ ಬೇಯಿಸಿ. ಹದವಾಗಿ ಬೆಂದ ಬಳಿಕ ಮತ್ತೊಮ್ಮೆ ಕಾವಲಿಯಲ್ಲಿ ರೊಟ್ಟಿಯನ್ನು ಮಗುಚಿ ಬೇಯಿಸಿ.ಜೋಳದ ರೊಟ್ಟಿ ರೆಡಿ.

ಜೋಳದ ರೊಟ್ಟಿಯಲ್ಲಿ ವಿಟಮಿನ್‌ ಎ, ಸಿ, ಕೆ ಮತ್ತು ಬಿ ವಿಟಮಿನ್‌ಗಳಿವೆ ಅಲ್ಲದೆ ಇದರಲ್ಲಿ ಕಬ್ಬಿಣದಂಶ, ರಂಜಕ, ಆ್ಯಂಟಿಆಕ್ಸಿಡೆಂಟ್‌ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನು ಜೋಳದ ರೊಟ್ಟಿ ಸವಿಯಲು ಶೇಂಗಾ ಬೀಜದ ಚ್ಟನಿ ಪುಡಿ, ತುಪ್ಪ, ತರಕಾರಿ ಪಲ್ಯ ಇವುಗಳನ್ನು ಬಳಸುತ್ತೇವೆ, ಇದರಿಂದಾಗಿ ತರಕಾರಿಯಲ್ಲಿರುವ ಪೋಷಕಾಂಶಗಳು ದೇಹವನ್ನು ಸೇರುತ್ತದೆ.ಗರ್ಭಿಣಿಯರಿಗೆ ಒಳ್ಳೆಯದು ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಜೋಳದ ರೊಟ್ಟಿ ತುಂಬಾ ಒಳ್ಳೆಯದು. ಹೆರಿಗೆಯ ಬಳಿಕ ಜೋಳದ ರೊಟ್ಟಿ ತಿನ್ನುವುದರಿಂದ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ದೊರೆಯುತ್ತದೆ, ಮೈ ಬೊಜ್ಜು ಹೆಚ್ಚಾಗುವುದನ್ನು ತಡೆಗಟ್ಟಬಹುದು. ಥೈರಾಯ್ಡ್‌ ಗ್ರಂಥಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿ ಇದರಲ್ಲಿ ಅತ್ಯಧಿಕ ಬೀಟಾಕೆರೋಟಿನ್‌ ಹಾಗೂ ಸೆಲೆನಿಯಮ್‌ ಇರುವುದರಿಂದ ಥೈರಾಯ್ಡ್‌ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ತುಂಬಾನೇ ಸಹಕಾರಿ.

ಕರುಳನ್ನು ಆರೋಗ್ಯವಾಗಿ ಇಡುತ್ತದೆ. ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತೆ. ಜೋಳದ ರೊಟ್ಟಿಯಲ್ಲಿ ಫೈಬರ್ ಅಂಶಗಳು ಹೆಚ್ಚಾಗಿರುತ್ತವೆ. ವಿಶೇಷವಾಗಿ ಬೀಟಾ-ಗ್ಲುಕನ್ ಎಲ್‌ಡಿಎಲ್‌ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೋಳದ ರೊಟ್ಟಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

- Advertisement -

Related news

error: Content is protected !!