Sunday, June 14, 2026
spot_imgspot_img
spot_imgspot_img

ವೀಳ್ಯದೆಲೆಗೆ ಸುಣ್ಣವೆಂದು ಇಲಿ ಪಾಷಾಣ ಬೆರೆಸಿ ತಿಂದ ವೃದ್ಧೆ ಸಾವು

- Advertisement -
- Advertisement -
vtv vitla

ಉಡುಪಿ : ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣ ಬೆರೆಸಿ ತಿಂದು ಅಸ್ವಸ್ಥಗೊಂಡ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಸಾಧು ಪೂಜಾರ್ತಿ(71) ಎಂದು ಗುರುತಿಸಲಾಗಿದೆ.

ಇವರು ಬೆಳಗ್ಗೆ ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇರಿಸಿ ತಿಂದಿದ್ದು, ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಮಗಳು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!