Thursday, May 2, 2024
spot_imgspot_img
spot_imgspot_img

ವೇಣೂರು: ಅರೆಸ್ಟ್ ವಾರಂಟ್ ನೀಡಲು ಬಂದ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಆರೋಪ: ವಾರಂಟ್ ಜಾರಿಯಾದ ವ್ಯಕ್ತಿ ಅಬ್ದುಲ್ ಲತೀಫ್ ಸಹಿತ ಐವರ ವಿರುದ್ಧ ಪ್ರಕರಣ ದಾಖಲು..!

- Advertisement -G L Acharya panikkar
- Advertisement -

ವೇಣೂರು: ಅರೆಸ್ಟ್ ವಾರಂಟ್ ಜಾರಿಯಾದ ವ್ಯಕ್ತಿಯೋರ್ವ ಅರೆಸ್ಟ್ ವಾರಂಟ್ ಜಾರಿಯಾಗಿದೆ ಎಂದು ಹೇಳಲು ಬಂದ ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ಬೈದು, ಹಲ್ಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ನಡೆದಿದೆ.

ಈ ಬಗ್ಗೆ ಪೊಲೀಸ್ ಸಿಬ್ಬಂದಿಗಳು ವೇಣೂರು ಠಾಣೆಗೆ ದೂರು ನೀಡಿದ್ದು, ಅಬ್ದುಲ್ ಲತೀಫ್, ಮೋನು, ಅನಿಸ, ಸಫಿಯಾ, ನೆಬಿಸಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

vtv vitla
vtv vitla

ಪೊಲೀಸ್ ಸಿಬ್ಬಂದಿಗಳು ಅಬ್ದುಲ್ ಲತೀಫ್ ಎಂಬವನಿಗೆ ಅರೆಸ್ಟ್ ವಾರಂಟ್ ಜಾರಿಯಾಗಿರುವ ಬಗ್ಗೆ ಹೇಳಲು ತೆರಳಿ “ನಾವು ಶಂಕರನಾರಾಯಣ ಪೊಲೀಸ್ ಠಾಣಾ ಪೊಲೀಸರು ಎಂದು ಹೇಳಿ ತನ್ನ ಐಡಿ ಕಾರ್ಡ್ ಗಳನ್ನು ತೋರಿಸಿ ನಿಮಗೆ ನ್ಯಾಯಾಲಯದ ವಾರಂಟ್ ಇದೆ” ಎಂದು ಹೇಳಿ ವಾರಂಟ್ ಪ್ರತಿಯನ್ನು ತೋರಿಸಿ ನಮ್ಮೊಂದಿಗೆ ಬರುವಂತೆ ತಿಳಿಸಿದಾಗ ಆಪಾದಿತನು ವಾರಂಟನ್ನು ಕಿತ್ತುಕೊಂಡು ನೀವು ಯಾವ ಸೀಮೆಯ ಪೊಲೀಸರು ನನ್ನನ್ನು ಏನು ಮಾಡಲು ಆಗುವುದಿಲ್ಲ, ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಅಂಗಿಯ ಕಾಲರ್ ಹಿಡಿದು ಉರುಡಾಟ ನಡೆಸಿ ಇತರ ಆರೋಪಿಗಳನ್ನು ಕರೆದು ಅಕ್ರಮಕೂಟ ಸೇರಿಸಿ ಹಲ್ಲೆಗೈದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಠಾಣೆಯಲ್ಲಿ ಅ.ಕ್ರ ನಂಬ್ರ 22-2022 ಕಲಂ: 143, 147, 148, 504, 353, 332 ಜೊತೆಗೆ 149 ಐಪಿಸಿ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!