Friday, March 29, 2024
spot_imgspot_img
spot_imgspot_img

ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟ; ತಾಯಿ, ಇಬ್ಬರು ಮಕ್ಕಳು ಸಾವು

- Advertisement -G L Acharya panikkar
- Advertisement -

ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟವಾಗಿ ತಾಯಿ ಹಾಗೂ ಇಬ್ಬರು ಪುತ್ರಿಯರು ಸಜೀವ ದಹನವಾಗಿರುವ ಘಟನೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ನಡೆದಿದೆ.

ತಾಯಿ ರಂಜಿತಾ (31), ಪುತ್ರಿಯರಾದ ಮೃದುಲಾ (13) ಮತ್ತು ತಾರುಣ್ಯಾ ( 6) ಮೃತ ದುರ್ದೈವಿಗಳಾಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದ ಅವರ ಪತಿ ಆರ್‌ಟಿಪಿಎಸ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ಅಪರಾಹ್ನ ಸುಮಾರು 2: 45ಕ್ಕೆ ಈ ದುರ್ಘಟನೆ ನಡೆದಿದೆ. ಮಧ್ಯಾಹ್ನ ಇಬ್ಬರು ಪುತ್ರಿಯರನ್ನು ಶಾಲೆಯಿಂದ ರಂಜಿತಾ ಮನೆಗೆ ಕರೆ ತಂದಿದ್ದಾರೆ. ಮನೆಯಲ್ಲಿ ಹೊಗೆ ಆವರಿಸಿದ್ದು ಕಂಡು ಜನರು ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದೆವು’ ಎಂದು ಶಕ್ತಿನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಬಂಧಿಕರ ಹೇಳಿಕೆ ಆಧಾರಿಸಿ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Related news

error: Content is protected !!