Sunday, April 28, 2024
spot_imgspot_img
spot_imgspot_img

ವಿಶ್ವದ ಅತಿ ಎತ್ತರದ ಶ್ವಾನ ಜೀಯಸ್ ಕಾನ್ಸರ್‌ಗೆ ಬಲಿ

- Advertisement -G L Acharya panikkar
- Advertisement -

ವಿಶ್ವದ ಅತಿ ಎತ್ತರದ ಶ್ವಾನ ಅನ್ನೋ ಖ್ಯಾತಿಗಳಿಸಿದ್ದ ಜೀಯಸ್ ಸಾವನ್ನಪ್ಪಿದೆ. ಅತೀ ಎತ್ತರದ ಕಾರಣಕ್ಕೆ3 ವರ್ಷದ ಈ ಜೀಯಸ್‌ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ಗೆ ಸೇರಿತ್ತು. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಜೀಯಸ್‌ ಕೊನೆಯುಸಿರೆಳೆದಿದೆ.

3 ವರ್ಷದ ಜೀಯಸ್ 2022ರಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿತ್ತು. ಅಂದು ಜೀಯಸ್‌ ಅನ್ನು ಅಳತೆ ಮಾಡಲಾಗಿತ್ತು. ತೀರ್ಪುಗಾರರ ಪ್ರಕಾರ 1.46 ಮೀ (3 ಅಡಿ 5.18 ಇಂಚು) ಎತ್ತರವನ್ನು ಹೊಂದಿತ್ತು. ಈ ಮೂಲಕ ಜೀಯಸ್ ವಿಶ್ವದ ಅತಿ ಎತ್ತರದ ಶ್ವಾನ ಅನ್ನೋ ಅವಾರ್ಡ್ ಪಡೆದಿತ್ತು.

ಶ್ವಾನಕ್ಕೆ ಮಾರಕ ಕ್ಸಾನ್ಸರ್ ಇರುವುದು ಗೊತ್ತಾಗಿದ್ದು, ಕ್ಯಾನ್ಸರ್‌ನಿಂದ ಶ್ವಾನವನ್ನು ಪಾರು ಮಾಡಲು ಅದರ ಮುಂಭಾಗದ ಬಲಗಾಲನ್ನು ಕತ್ತರಿಸಬೇಕಾಗಿ ಬಂತು. ಆದರೆ ಶಸ್ತ್ರಚಿಕಿತ್ಸೆಯ ನಂತರ ಶ್ವಾನಕ್ಕೆ ಎದುರಾದ ನ್ಯುಮೋನಿಯಾ ಕಾಯಿಲೆಯ ಪರಿಣಾಮ ಮೂರು ವರ್ಷ ಪ್ರಾಯದ ಈ ಶ್ವಾನ ಜೀಯಸ್ ನಿನ್ನೆ ಸಾವನ್ನಪ್ಪಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ.

ಗ್ರೇಟ್ ಡೇನ್ ತಳಿಯ ಜೀಯಸ್‌ ಅನ್ನು 3 ವರ್ಷಗಳಿಂದ ಪ್ರೀತಿಯಿಂದ ನೋಡಿಕೊಂಡಿದ್ದ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದು, ಸಂತಾಪ ಸೂಚಿಸಲಾಗಿದೆ.

ಬರೀ 3 ವರ್ಷ ಜೀವಿಸಿ ಪ್ರಾಣಬಿಟ್ಟ ಈ ಶ್ವಾನ ಜೀಯಸ್ ಅಮೆರಿಕಾದ ಟೆಕ್ಸಾಸ್‌ನ ಬೆಡ್‌ಪೋರ್ಡ್‌ನಲ್ಲಿ ನೆಲೆಸಿತ್ತು. ಮೂರು ವರ್ಷಕ್ಕೆಲ್ಲಾ 3 ಅಡಿ ಎತ್ತರ ಬೆಳೆದ ಇದು ತನ್ನ ಅತ್ಯಲ್ಪ ಜೀವಿತಾವಧಿಯಲ್ಲಿ ಗಿನ್ನೆಸ್ ಪುಟವನ್ನು ಸೇರಿತ್ತು.

- Advertisement -

Related news

error: Content is protected !!