Thursday, May 2, 2024
spot_imgspot_img
spot_imgspot_img

ಶಾಲಾ ದಾಖಲಾತಿ ನಿಯಮಗಳಲ್ಲಿ ಬದಲಾವಣೆ

- Advertisement -G L Acharya panikkar
- Advertisement -

ಮುಂದಿನ ಶೈಕ್ಷಣಿಕ ವರ್ಷದಿಂದ (2023-24) ಮಗುವಿಗೆ ಆರು ವರ್ಷ ತುಂಬಿದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು, ಈಗ ಅದರಲ್ಲಿ ತಿದ್ದುಪಡಿ ಮಾಡಿದ್ದು, ಈ ನಿಯಮದ ಅನುಷ್ಠಾನವನ್ನು ಎರಡು ವರ್ಷ ಮುಂದೂಡಿದೆ. ಅಂದರೆ, ಈ ನಿಯಮ 2025 26ನೇ ಸಾಲಿನಿಂದ ಅನ್ವಯವಾಗಲಿದೆ.

ಹೊಸ ನಿಯಮ ಒಂದನೇ ತರಗತಿ ಸೇರ್ಪಡೆ ವಿಚಾರಕ್ಕೆ ಬಂದಾಗ 2025-26ರಿಂದ ಜಾರಿಗೆ ಬರುವುದಾದರೂ ಎಲ್‌ಕೆಜಿ ಸೇರ್ಪಡೆ ವಿಷಯದಲ್ಲಿ ಈಗದಿಂದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ, ಅಂದರೆ 2025-26ನೇ ಸಾಲಿಗೆ ಬರುವಾಗ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರುವುದು ಕಡ್ಡಾಯ, ಹಾಗಾಗಿ, ಮುಂದಿನ ವರ್ಷ 2023-24 ಎಲ್‌ಕೆಜಿಗೆ ಮಗುವನ್ನು ಸೇರಿಸಬೇಕು ಎಂದಾದರೆ ಮಗುವಿಗೆ ಕಡ್ಡಾಯವಾಗಿ ನಾಲ್ಕು, ವರ್ಷ ಆಗಿರಬೇಕು.

ಇದಾದ ಬಳಿಕ 2022ರ ಜುಲೈ 26ರಂದು ಹೊರಡಿಸಿದ ಸುತ್ತೋಲೆಯಲ್ಲಿ ಆಯಾ ಶೈಕ್ಷಣಿಕ ವರ್ಷದ ಜೂನ್ ಒಂದಕ್ಕೆ ಅನ್ವಯವಾಗುವ ಹಾಗೆ ಮಗುವಿನ ವಯಸ್ಸು 5 ವರ್ಷ ಪೂರ್ಣಗೊಂಡಿದ್ದರೆ ಮಾತ್ರ 1ನೇ ತರಗತಿಗೆ ಪ್ರವೇಶ ಪಡೆಯಲು ಸಾಧ್ಯ ಎಂದು ತಿಳಿಸಿತ್ತು. ಈಗ ಈ ನಿಯಮವನ್ನು ಎರಡು ವರ್ಷದ ಮಟ್ಟಿಗೆ ಸಡಿಲಿಸಲಾಗಿದೆ. ಹೊಸ ನಿಯಮ 2025- 26ನೇ ಸಾಲಿನಿಂದ ಜಾರಿಗೆ ಬರಲಿದೆ. ಆದರೆ, ಎಲ್‌ ಕೆಜಿ ಸೇರ್ಪಡೆಗೆ ನಾಲ್ಕು ವರ್ಷ ಕಡ್ಡಾಯ ಎನ್ನುವ ನಿಯಮ ಮುಂದಿನ ವರ್ಷದಿಂದಲೇ ಜಾರಿಗೆ ಬರಲಿದೆ.

- Advertisement -

Related news

error: Content is protected !!