Monday, May 6, 2024
spot_imgspot_img
spot_imgspot_img

ಶಾಲಾ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಪಿಯುಸಿ ವಿದ್ಯಾರ್ಥಿನಿ; 10ನೇ ತರಗತಿ ವಿದ್ಯಾರ್ಥಿಯ ಬಂಧನ

- Advertisement -G L Acharya panikkar
- Advertisement -
astr
vtv vitla

ತಮಿಳುನಾಡು: ನವಜಾತ ಶಿಶುವೊಂದರ ಮೃತದೇಹ ಶಾಲೆಯೊಂದರ ಸಮೀಪದ ಪೊದೆಗಳ ನಡುವೆ ಪತ್ತೆಯಾಗಿರುವ ಘಟನೆ ಎರಡು ದಿನಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿದೆ. ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ 11ನೇ ತರಗತಿ ವಿದ್ಯಾರ್ಥಿನಿ, ಶಿಶುವನ್ನು ಶಾಲೆಯ ಸಮೀಪದ ಪೊದೆಗಳ ನಡುವೆ ಎಸೆದಿದ್ದಳು.

ಈ ಘಟನೆ ತಮಿಳುನಾಡಿನ ಕಡ್ಡಲೂರ್​ ಜಿಲ್ಲೆಯ ಭುವನಗಿರಿ ಪ್ರದೇಶದಲ್ಲಿ ನಡೆದಿದೆ. ಹುಡುಗಿಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಗುರುವಾರ ವಿದ್ಯಾರ್ಥಿಯೊಬ್ಬ ಪೊದೆಯಲ್ಲಿ ಮಗುವನ್ನು ನೋಡಿದಾಗ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಶುವಿನ ಮೃತದೇಹವನ್ನು ವಶಕ್ಕೆ ಪಡೆದರು.

ಶಿಶುವಿನ ಕರುಳು ಬಳ್ಳಿಯನ್ನು ಸರಿಯಾಗಿ ಕತ್ತರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು, ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿ, ಇಲ್ಲಿಗೆ ತಂದು ಎಸೆದಿರಬಹುದು ಎಂದು ಊಹಿಸಿದರು. ಬಳಿಕ ತನಿಖೆ ನಡೆದಾಗ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವುದು ಬಯಲಾಯಿತು. ವಿದ್ಯಾರ್ಥಿನಿಯು ಕೂಡ ತಪ್ಪೊಪ್ಪಿಕೊಂಡಳು. ಶಾಲೆಯ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಶಾಲೆಯ ಕಾಪೌಂಡ್​ ಬಳಿಯಿದ್ದ ಪೊದೆಗಳ ನಡುವೆ ಮಗುವನ್ನು ಎಸೆದು ಮನೆಗೆ ಹೋಗಿದ್ದಳು. ಮತ್ತೊಂದು ಶಾಲೆಯ 10ನೇ ತರಗತಿ ವಿದ್ಯಾರ್ಥಿಯಿಂದ ತಾನು ಗರ್ಭಿಣಿಯಾಗಿದ್ದಾಗಿ ವಿಚಾರಣೆ ವೇಳೆ ಹುಡುಗಿ ಹೇಳಿಕೊಂಡಿದ್ದಾಳೆ.

ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕನ ವಿರುದ್ಧ ಪೋಕ್ಸೊ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!