Sunday, July 26, 2026
spot_imgspot_img
spot_imgspot_img

ಶಾಲೆಗೆ ಲಂಚ್ ಬಾಕ್ಸ್ ನಲ್ಲಿ ಊಟಕ್ಕೆ ಗೋಮಾಂಸದ ಭಕ್ಷ್ಯ ತಂದಿದ್ದ ಮುಖ್ಯ ಶಿಕ್ಷಕಿಯ ಬಂಧನ..!

- Advertisement -
- Advertisement -

ಶಾಲೆಗೆ ಮಧ್ಯಾಹ್ನದ ಊಟಕ್ಕೆ ಬೇಯಿಸಿದ ಗೋಮಾಂಸ ಭಕ್ಷ್ಯ ತಂದಿದ್ದಕ್ಕಾಗಿ ಅಸ್ಸಾಂನ ಶಾಲೆಯೊಂದರ ಮುಖ್ಯಶಿಕ್ಷಕಿಯನ್ನು ಅರೆಸ್ಟ್ ಮಾಡಿರುವ ಆಘಾತಕಾರಿ ‌ಘಟನೆ ನಡೆದಿದೆ‌.

ಲಖಿಪುರ ಪ್ರದೇಶದ ಹುರ್ಕಾಚುಂಗಿ ಮಿಡಲ್ ಇಂಗ್ಲಿಷ್ ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷರು ಮಧ್ಯಾಹ್ನದ ಊಟಕ್ಕೆ ಗೋಮಾಂಸವನ್ನು ಕೊಂಡೊಯ್ದಿದ್ದಾರೆ ಎಂದು ಆರೋಪಿಸಿ ಮುಖ್ಯೋಪಾಧ್ಯಾಯಿನಿ ವಿರುದ್ಧ ದೂರು ದಾಖಲಿಸಿದ್ದರು.

vtv vitla
vtv vitla

ಶಿಕ್ಷಕಿಯನ್ನು ಮೇ 16 ರಂದು ಪೊಲೀಸ್ ಠಾಣೆಗೆ ಕರೆತಂದಿದ್ದೇವೆ. ವಿಚಾರಣೆಯ ನಂತರ ಅವರನ್ನು ಬಂಧಿಸಲಾಯಿತು ಮತ್ತು ನ್ಯಾಯಾಲಯವು ಮರುದಿನ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೃಣಾಲ್ ದೇಕಾ ಅವರು ತಿಳಿಸಿದ್ದಾರೆ.

ಮುಖ್ಯೋಪಾಧ್ಯಾಯಿನಿ ವಿರುದ್ಧ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಪ್ರಕರಣವನ್ನು ದಾಖಲಿಸಲಾಗಿದೆ.

- Advertisement -

Related news

error: Content is protected !!