Friday, April 26, 2024
spot_imgspot_img
spot_imgspot_img

ಶಿಂಧೆ ಬಣದ ಪಾಲಾಯ್ತು ಶಿವಸೇನೆ ಬಿಲ್ಲು-ಬಾಣ! ಉದ್ಧವ್​ ಠಾಕ್ರೆಗೆ ತೀವ್ರ ಮುಖಭಂಗ

- Advertisement -G L Acharya panikkar
- Advertisement -

ನವದೆಹಲಿ: ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ. ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಬಾಣ’ವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ.

ತಮ್ಮ ಬಣವವೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಆಯೋಗ ಅಂತಿಮವಾಗಿ ಬಿಲ್ಲು ಬಾಣ’ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದೆ.

ಸಂಪೂರ್ಣ ವರದಿ ಓದಿರಿ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿವೇತನ..! ಇಂದೇ ವಿಟ್ಲದ ಬಿಎಂಎಸ್‌ ಕಛೇರಿ ಸಂಪರ್ಕಿಸಿ

2019ರ ಮಹಾರಾಷ್ಟ್ರ ವಿಧಾನಸೌಭೆ ಚುನಾವಣೆಯಲ್ಲಿ ಗೆದ್ದಿದ್ದ ಶಿವಸೇನೆಯ 55 ಅಭ್ಯರ್ಥಿಗಳ ಪೈಕಿ ಶೇ 70 ರಷ್ಟು ಮಂದಿ ಏಕನಾಥ್​ ಶಿಂಧೆಯವರನ್ನು ಬೆಂಬಲಿಸಿದ್ದರು.

ಪಕ್ಷ ಒಡೆದು ಇಬ್ಭಾಗವಾದ ಮೇಲೆ ಚಿಹ್ನೆಗಾಗಿ ಪ್ರತಿಷ್ಠೆಯ ಸಂಘರ್ಷ ನಡೆದಿತ್ತು. ಎರಡೂ ಬಣಗಳು ತಮ್ಮದೇ ನೈಜ ಶಿವಸೇನೆ ಎಂದು ಎಂದು ಎರಡೂ ಬಣಗಳು ವಾಕ್ಸಮರಕ್ಕೆ ಇಳಿದಿದ್ದವು. ಇಬ್ಬರ ಜಗಳದ ನಂತರ ಬಿಲ್ಲು ಬಾಣದ ಗುರುತಿಗಾಗಿ ಸುಪ್ರಿಂ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಚುನಾವಣಾ ಆಯೋಗ ಮೊದಲು ಎರಡೂ ಬಣಗಳಿಗೂ ಚಿಹ್ನೆಯನ್ನು ಬಳಸದಂತೆ ಭಾರತೀಯ ಚುನಾವಣಾ ಆಯೋಗ ಆದೇಶ ನೀಡಿತ್ತು. ಎರಡು ಬಣಗಳಿಗೂ ಪ್ರತ್ಯೇಕವಾದ ಚಿಹ್ನೆಯನ್ನು ಹಂಚಿಕೆ ಮಾಡಲಾಗಿತ್ತು. ಆಗ ಶಿಂಧೆ ಬಣವು ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ಪಡೆದಿದ್ದರೆ, ಉದ್ಧವ್ ಠಾಕ್ರೆ ಬಣವು ಪ್ರಜ್ವಲಿಸುವ ಜ್ಯೋತಿಯ ಚಿಹ್ನೆಯನ್ನು ಹೊಂದಿತ್ತು.

ಸುಪ್ರಿಂಕೋರ್ಟ್​ಗೆ ಹೋಗಲು ನಿರ್ಧಾರ; ಉದ್ಧವ್ ಠಾಕ್ರೆ
ಏಕನಾಥ್ ಶಿಂಧೆ ಬಣ ಬಿಲ್ಲು ಬಾಣದ ಚಿಹ್ನೆ ಕದ್ದಿದೆ. ಈ ಕಳ್ಳತನಕ್ಕೆ ಜನರು ಸೇಡು ತೀರಿಸಿಕೊಳ್ಳಲಿದ್ದಾರೆ. ಚುನಾವಣಾ ಆಯೋಗದ ಆದೇಶದ ವಿರುದ್ಧ ಖಂಡಿತವಾಗಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಸುಪ್ರೀಂ ಕೋರ್ಟ್ ಈ ಆದೇಶವನ್ನು ರದ್ದುಗೊಳಿಸುತ್ತದೆ ಮತ್ತು 16 ಶಾಸಕರನ್ನು ನ್ಯಾಯಾಲಯದಿಂದ ಅನರ್ಹಗೊಳಿಸಲಾಗುವುದು ಎಂಬ ನಂಬಿಕೆಯಿದೆ ಉದ್ಧವ್ ಠಾಕ್ರೆ ಹೇಳಿದ್ದಾರೆ.

- Advertisement -

Related news

error: Content is protected !!