Monday, July 7, 2025
spot_imgspot_img
spot_imgspot_img

ಶಿಕ್ಷಣದಲ್ಲಿ ದೊಡ್ಡ ಬದಲಾವಣೆಗಾಗಿ ಗುಜರಾತ್‌ನ ವಿದ್ಯಾಸಮೀಕ್ಷಾ ಕೇಂದ್ರವನ್ನು ಅಧ್ಯಯನ ಮಾಡುವಂತೆ ರಾಜ್ಯಗಳಿಗೆ ಮೋದಿ ಸೂಚನೆ

- Advertisement -
- Advertisement -

ದೆಹಲಿ: ಗಾಂಧಿನಗರದಲ್ಲಿರುವ ವಿದ್ಯಾಸಮೀಕ್ಷಾ ಕೇಂದ್ರವು ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳನ್ನು ತರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿರುವ ಬನಾಸ್ ಡೈರಿ ಸಂಕುಲದಲ್ಲಿ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ವಿದ್ಯಾ ಸಮೀಕ್ಷಾ ಕೇಂದ್ರದಂತಹ ಆಧುನಿಕ ವ್ಯವಸ್ಥೆಯಿಂದ ದೇಶದ ಮಕ್ಕಳು ಪ್ರಯೋಜನ ಪಡೆಯುವ ಮೂಲಕ ಭಾರತಕ್ಕೆ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತಾರೆ ಎಂದರು.“ಗುಜರಾತ್ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಅಭಿವೃದ್ಧಿಯನ್ನು ಕಂಡಿರುವುದು ಹೆಮ್ಮೆ ತಂದಿದೆ. ನಿನ್ನೆ ಗಾಂಧಿನಗರದ ವಿದ್ಯಾ ಸಮೀಕ್ಷಾ ಕೇಂದ್ರದಲ್ಲಿ ನಾನು ಇದನ್ನು ಅನುಭವಿಸಿದೆ.ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಂತಹ ಬೃಹತ್ ತಂತ್ರಜ್ಞಾನವನ್ನು ಬಳಸಿರುವುದು ಅಚ್ಚರಿಯುಂಟುಮಾಡಿದೆ. ಈ ಕ್ಷೇತ್ರದೊಂದಿಗೆ ನನಗೆ ಮೊದಲಿನಿಂದಲೂ ಒಡನಾಟವಿದೆ, ಆದರೆ ನಿನ್ನೆ ನಾನು ವಿಶೇಷವಾಗಿ ಗಾಂಧಿನಗರಕ್ಕೆ ಇದನ್ನು ನೋಡಲು ಹೋಗಿದ್ದೆ ಎಂದು ಅವರು ಹೇಳಿದರು. ವಿದ್ಯಾಸಮೀಕ್ಷಾ ಕೇಂದ್ರವು ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಲ್ಲದು ಎಂದು ಪ್ರಧಾನಿ ಒತ್ತಿ ಹೇಳಿದರು.“ವಿದ್ಯಾಸಮೀಕ್ಷಾ ಕೇಂದ್ರವನ್ನು ಅಧ್ಯಯನ ಮಾಡಲು ನಾನು ಭಾರತ ಸರ್ಕಾರದ ಸಂಬಂಧಿಸಿದ ಸಚಿವಾಲಯಗಳು ಮತ್ತು ಅಧಿಕಾರಿಗಳನ್ನು ಕೇಳುತ್ತೇನೆ. ವಿವಿಧ ರಾಜ್ಯಗಳ ಸಂಬಂಧಪಟ್ಟ ಇಲಾಖೆಗಳು ಸಹ ಗಾಂಧಿ ನಗರಕ್ಕೆ ಬಂದು ಉಪಕ್ರಮವನ್ನು ಅಧ್ಯಯನ ಮಾಡಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

ಬಂದು ಉಪಕ್ರಮವನ್ನು ಅಧ್ಯಯನ ಮಾಡಬೇಕು” ಎಂದು ಪ್ರಧಾನಿ ಮೋದಿ ಹೇಳಿದರು. ತಮ್ಮತವರು ರಾಜ್ಯಗುಜರಾತ್‌ಗೆ ಮೂರು ದಿನಗಳ ಭೇಟಿಗಾಗಿ ಸೋಮವಾರ ಅಹಮದಾಬಾದ್‌ಗೆ ಆಗಮಿಸಿದ ಪ್ರಧಾನಿ, ಬನಾಸ್ ಡೈರಿಯನ್ನು ಶ್ಲಾಘಿಸಿದರು ಮತ್ತು ಸ್ಥಳೀಯ ರೈತರ ಆದಾಯವನ್ನು ಹೆಚ್ಚಿಸಲು ಇತರ ಸಂಪನ್ಮೂಲಗಳನ್ನು ಬಳಸಬಹುದು ಎಂದು ಇದು ಸಾಬೀತುಪಡಿಸಿದೆ ಎಂದು ಹೇಳಿದರು.

“ಬಹುಶಃ ನನ್ನ ಜೀವನದಲ್ಲಿ ಮೊದಲ ಬಾರಿಗೆ, ಎರಡು ಲಕ್ಷಕ್ಕೂ ಹೆಚ್ಚು ತಾಯಂದಿರು ಮತ್ತು ಸಹೋದರಿಯರು ನನ್ನನ್ನು ಮತ್ತು ನಮ್ಮೆಲ್ಲರನ್ನು ಇಲ್ಲಿ ಆಶೀರ್ವದಿಸುತ್ತಿದ್ದಾರೆ.ತಾಯಂದಿರು ಮತ್ತು ಸಹೋದರಿಯರನ್ನು ಸಬಲೀಕರಣಗೊಳಿಸುವಾಗ ಗ್ರಾಮದ ಆರ್ಥಿಕತೆಯನ್ನು ಹೇಗೆ ಬಲಪಡಿಸುವುದು ಮತ್ತು ಸ್ವಾವಲಂಬಿ ಭಾರತವನ್ನು ಹೆಚ್ಚಿಸುವ ಸಹಕಾರಿ ಆಂದೋಲನಕ್ಕೆ ಈ ಡೈರಿ ಭಾರತಕ್ಕೆ ಉದಾಹರಣೆಯಾಗಿದೆ. ಅದನ್ನೆಲ್ಲ ಇಲ್ಲಿ ನೇರವಾಗಿ ಅನುಭವಿಸಬಹುದು’ ಎಂದು ಪ್ರಧಾನಿ ಮೋದಿ ಹೇಳಿದರು.

“ಡೈರಿ ವಿಸ್ತರಣೆಗೆ ಬನಾಸ್ ಡೈರಿ ಸಂಕುಲ್, ಚೀಸ್ ಮತ್ತು ವೇ ಪ್ಲಾಂಟ್ ಪ್ರಮುಖವಾಗಿವೆ ಆದರೆ ಸ್ಥಳೀಯ ರೈತರ ಆದಾಯವನ್ನು ಹೆಚ್ಚಿಸಲು ಇತರ ಸಂಪನ್ಮೂಲಗಳನ್ನು ಬಳಸಬಹುದು ಎಂದು ಇದು ಸಾಬೀತುಪಡಿಸಿದೆ’ ಎಂದು ಅವರು ಹೇಳಿದರು.

ಬನಾಸ್ ಡೈರಿಯ ಗೋಬರ್ ಗ್ಯಾಸ್ ಸ್ಥಾವರಗಳು ಸರ್ಕಾರದ ‘ಕಚ್‌ ಸೇ ಕಂಚನ್ (ಕಸದಿಂದ ರಸ)’ ಅಭಿಯಾನಕ್ಕೆ ಸಹಾಯ ಮಾಡುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂದು ಇಲ್ಲಿ ಬಯೋ ಸಿಎನ್‌ಜಿ ಸ್ಥಾವರವನ್ನು ಲೋಕಾರ್ಪಣೆ ಮಾಡಲಾಗಿದ್ದು, ನಾಲ್ಕು ಗೋಬರ್ ಗ್ಯಾಸ್ ಪ್ಲಾಂಟ್‌ಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಬನಾಸ್ ಡೈರಿ ದೇಶಾದ್ಯಂತ ಇಂತಹ ಹಲವು ಸ್ಥಾವರಗಳನ್ನು ಸ್ಥಾಪಿಸಲಿದೆ. ಇದು ಸರ್ಕಾರದ ‘ಕಚ್ ರೇ ಸೆ ಕಂಚನ್’ ಅಭಿಯಾನಕ್ಕೆ ಸಹಾಯ ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಗೋಬರ್ಧನ್ ಮೂಲಕ ಹಲವು ಗುರಿಗಳನ್ನು ಏಕಕಾಲದಲ್ಲಿ ಸಾಧಿಸಲಾಗುತ್ತಿದೆ. ಇದು ಹಳ್ಳಿಗಳಲ್ಲಿ ಸ್ವಚ್ಛತೆಗೆ ಶಕ್ತಿ ನೀಡುತ್ತಿದೆ ಮತ್ತು ಎರಡನೆಯದಾಗಿ ರೈತರು ಹಸುವಿನ ಸಗಣಿ ಮಾರಿ ಹಣ ಪಡೆಯಬಹುದಾಗಿದೆ ಎಂದು ಮೋದಿ ಹೇಳಿದ್ದಾರೆ.

- Advertisement -

Related news

error: Content is protected !!