Thursday, April 25, 2024
spot_imgspot_img
spot_imgspot_img

ಶಿವಮೊಗ್ಗದಲ್ಲಿ ಕಂಪಿಸಿದ ಭೂಮಿ; ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದ ಜನ

- Advertisement -G L Acharya panikkar
- Advertisement -

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮೂಲಗಳ ಪ್ರಕಾರ ಮುಂಜಾನೆ 3.50 ರಿಂದ 4.00 ಗಂಟೆಯವರೆಗೂ ಭೂಮಿ ನಡುಗಿದ ಅನುಭವವಾಗಿದೆ ಎನ್ನಲಾಗಿದೆ. ಭೂಮಿ ಕಂಪಿಸುವುದರ ಜೊತೆಗೆ ಭಾರೀ ಶಬ್ದ ಕೇಳಿ ಬಂದಿದ್ದು, ಮನೆಗೆ ಗೋಡೆ ಹಂಚುಗಳು ಅಲುಗಾಡಿವೆ ಎನ್ನಲಾಗಿದೆ.

ಮುಂಜಾನೆಯ ಸುಖ ನಿದ್ದೆಯಲ್ಲಿದ್ದ ಶಿರಾಳಕೊಪ್ಪದ ಜನ ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಭೂಮಿ ಕಂಪಿಸುತ್ತಿರುವ ಅನುಭವವಾಗುತ್ತಿದ್ದಂತೆ ಮನೆಯಿಂದ ಹೊರ ಓಡಿ ಬಂದಿದ್ದಾರೆ. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವೃತೆ ದ 4.1ರಷ್ಟು ದಾಖಲಾಗಿದೆ ಎಂದು ತಿಳಿದು ಬಂದಿದೆ. ಶಿರಾಳಕೊಪ್ಪದ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡಕ್ಕೂ ಹೆಚ್ಚು ಸಲ ಭೂಮಿ ನಡುಗಿದ ಅನುಭವವಾಗಿದೆ ಎಂದು ಹೇಳಲಾಗಿದೆ.

ಭಾರೀ ಶಬ್ದದೊಂದಿಗೆ ಭೂಕಂಪನ ಅನುಭವ ಆಗುತ್ತಿದ್ದಂತೆ ಸುಖ ನಿದ್ದೆಯಲ್ಲಿದ್ದ ಜನ ಆತಂಕಗೊಂಡಿದ್ದಾರೆ. ಕಂಪನದ ಅನುಭವವಾಗುತ್ತಿದ್ದಂತೆಯೇ ಮಕ್ಕಳು ಮರಿಗಳನ್ನು ಎದೆಗವಚಿಕೊಂಡು ಹೊರಗೆ ಓಡಿಬಂದಿದ್ದಾರೆ. ಮೊದಲಿಗೆ ಒಮ್ಮೆ ಭೂಮಿ ಕಂಪಿಸಿದೆ. ಇದಾಗಿ ಹತ್ತು ನಿಮಿಷದ ಬಳಿಕ ಮತ್ತೊಮ್ಮೆ ಭಾರೀ ಶಬ್ದ ಕೇಳಿ ಬಂದಿದೆಯಾದರೂ ಕಂಪನದ ಅನುಭವ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಆದರೆ ಈ ಬಗ್ಗೆ ಇನ್ನೂ ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಸ್ಥಳೀಯರು ಮಾತ್ರ ಕಮೋಣ ಮತ್ತು ಶಬ್ದದಿಂದ ಆತಂಕಗೊಂಡಿದ್ದಾರೆ.

astr
- Advertisement -

Related news

error: Content is protected !!