Friday, May 3, 2024
spot_imgspot_img
spot_imgspot_img

ಶಿವಮೊಗ್ಗದಲ್ಲಿ ದಿಢೀರ್ ಶಬ್ಧಕ್ಕೆ ಭೂಮಿ ಬಿರುಕು; ಅವಳಿ ದ್ವೀಪದಲ್ಲೂ ಕಂಪಿಸಿದ ವಸುಂಧರೆ – ಸಂಭವಿಸುತ್ತಾ ಭಾರೀ ಅವಘಡ..!

- Advertisement -G L Acharya panikkar
- Advertisement -

ಶಿವಮೊಗ್ಗ: ಪಶ್ಚಿಮ ಘಟ್ಟದಲ್ಲಿ ಆಗಿದ್ದಾಗೆ ಭೂಕಂಪನ ಸಂಭವಿಸುತ್ತಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ. ಈಗ ಶಿವಮೊಗ್ಗದಲ್ಲೂ ದಿಢೀರ್ ಶಬ್ಧದಿಂದ ಭೂಮಿ ಸೀಳಿರುವ ಘಟನೆ ನಡೆದಿದೆ. ದಿಢೀರ್ ಶಬ್ದದಿಂದ ಭೂಮಿ ಸೀಳು ಆಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೇ ಬಂದ ಶಬ್ದಕ್ಕೆ ಜನ ಭಯಭೀತರಾಗಿ ಎಲ್ಲರೂ ಹೊರಗೆ ಓಡಿ ಬಂದು ನೋಡಿದರೆ, ಭೂಮಿ ಸೀಳು ಆಗಿರುವುದು ಕಂಡು ಬಂದಿದೆ.

ಭೂಮಿಯಿಂದ ನೀರು ಜೋರಾಗಿ ಉಕ್ಕಿ ಹರಿದಿದ್ದು, ಮನೆಗಳೆಲ್ಲ ಜಾಲವೃತಗೊಂಡಿದೆ. ಅಧಿಕಾರಿಗಳಿಗೆ ಎಷ್ಟು ಬಾರಿ ವಿಷಯ ತಿಳಿಸಿದರು, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಈ ಕುರಿತು ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂಡಮಾನ್ ಸಮುದ್ರದಲ್ಲಿ ಸರಣಿ ಭೂಕಂಪನ; 5ರಷ್ಟು ತೀವ್ರತೆ
ಇನ್ನು ಅಂಡಮಾನ್ ಸಮುದ್ರದಲ್ಲಿ ಸಂಭವಿಸಿರುವ ಸರಣಿ ಭೂಕಂಪನದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ತತ್ತರಿಸಿ ಹೋಗಿವೆ. ಅವಳಿ ದ್ವೀಪಗಳಲ್ಲಿ ಜುಲೈ 4 ಮತ್ತು ಜುಲೈ 5ರಂದು ಸರಣಿ ಭೂಕಂಪನ ಸಂಭವಿಸಿದೆ.

ಮಂಗಳವಾರ ಬೆಳಗ್ಗೆ 5:57ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯು ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಆದರೆ ಭೂಕಂಪನದಿಂದ ಯಾವುದೇ ಸಾವು-ನೋವು ಮತ್ತು ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.

ಜುಲೈ 5ರ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ರಾಜಧಾನಿ ಪೋರ್ಟ್ ಬ್ಲೇರ್‌ನಿಂದ 215 ಕಿ. ಮೀ. ದೂರದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

- Advertisement -

Related news

error: Content is protected !!