Friday, June 5, 2026
spot_imgspot_img
spot_imgspot_img

ಭೀಕರ ರಸ್ತೆ ಅಪಘಾತ; ಮೂವರು ವಿದ್ಯಾರ್ಥಿನಿಯರ ಮೇಲೆ ಹರಿದ ಜಲ್ಲಿ ಲಾರಿ

- Advertisement -
- Advertisement -
vtv vitla

ಶಿವಮೊಗ್ಗ: ಹಾಸ್ಟೆಲ್​ ವಿದ್ಯಾರ್ಥಿನಿಯರ ಮೇಲೆ ಜಲ್ಲಿ ಲಾರಿಯೊಂದು ಹರಿದು ಭೀಕರ ರಸ್ತೆ ಅಪಘಾತ ಸಂಭವಿಸಿದ ಘಟನೆ ಸಾಗರ ಸಮೀಪ ನಡೆದಿದೆ. ಅಪಘಾತಕ್ಕೊಳಗಾಗಿ ಮೂವರಿಗೆ ಭಾರಿ ಪೆಟ್ಟಾಗಿದ್ದು, ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ.

ಸಾಗರದ ಸಣ್ಣಮನೆ ಬಳಿ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಸಾಗರ ಟೌನ್ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ವಿದ್ಯಾರ್ಥಿನಿಯರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಆಗಿದ್ದು ಅಂಕಿತಾ, ಪ್ರತಿಮಾ, ಐಶ್ವರ್ಯ ಗಾಯಗೊಂಡವರಾಗಿದ್ದಾರೆ. ಇವರಲ್ಲಿ ಅಂಕಿತಾ ಅವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ. ಅಂಕಿತಾರಿಗೆ ಮೊದಲು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!