Tuesday, July 8, 2025
spot_imgspot_img
spot_imgspot_img

ಶೀತ, ಕೆಮ್ಮಿಗೆ ವೀಳ್ಯದೆಲೆ ಮನೆಮದ್ದು

- Advertisement -
- Advertisement -

ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿರುವ ವೀಳ್ಯದೆಲೆ ಆರೋಗ್ಯವನ್ನೂ ವೃದ್ಧಿಸುತ್ತದೆ. ವೀಳ್ಯದೆಲೆಯ ಆರೋಗ್ಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ.

ಗಾಯದ ನೋವು ನಿವಾರಣೆ: ವೀಳ್ಯದೆಲೆಯ ರಸವನ್ನು ಗಾಯವಾದಲ್ಲಿ ಹಚ್ಚಿದರೆ ಕೀವಾಗದಂತೆ ತಡೆಯುತ್ತದೆ. ಜತೆಗೆ ನೋವನ್ನೂ ಬೇಗನೆ ಕಡಿಮೆ ಮಾಡುತ್ತದೆ.

ದೇಹದ ತೂಕ ಇಳಿಸಿಕೊಳ್ಳಲು ವೀಳ್ಯದೆಲೆ ಅತ್ಯತ್ತಮ ಪದಾರ್ಥವಾಗಿದೆ. ವೀಳ್ಯೆದಲೆಯ ಕಷಾಯವನ್ನು ಮಾಡಿ ಸೇವಿದರೆ ದೇಹದಲ್ಲಿನ ಕೊಬ್ಬು ನಿವಾರಣೆಯಾಗುತ್ತದೆ ಎನ್ನುತ್ತಾರೆ ಬಲ್ಲವರು.

ಊಟದ ಬಳಿಕ ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ನಿವಾರಿಸಲು ವೀಳ್ಯದೆಲೆ ನೆರವಾಗುತ್ತದೆ. ಅದಕ್ಕೆ ಊಟವಾದ ಬಳಿಕ ಎಲೆ ಅಡಿಕೆ ಹಾಕುವ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದೆ.

vtv vitla
vtv vitla

ಜೀರ್ಣಕ್ರಿಯೆಯನ್ನು ವೀಳ್ಯದಲೆ ಉತ್ತಮಪಡಿಸುತ್ತದೆ. ತಿಂದ ಆಹಾರ ಸರಿಯಾಗಿ ಪಚನವಾಗುವಂತೆ ವೀಳ್ಯದೆಲೆ ನೆರವಾಗುತ್ತದೆ.

ಕಫ ನಿವಾರಣೆಗೆ ವೀಳ್ಯದೆಲೆ ಸಹಕಾರಿ. ಶೀತ ಕೆಮ್ಮು ನಿವಾರಣೆಗೂ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ಚರ್ಮ ವಿರೋಧಿ ಗುಣ ಹೊಂದಿರುವ ವೀಳ್ಯದೆಲೆ ಸೋಂಕನ್ನು ಕಡಿಮೆ ಮಾಡುತ್ತದೆ.

ದಂತಕ್ಷಯವನ್ನು ನಿವಾರಿಸಲು ವೀಳ್ಯದೆಲೆ ನೆರವಾಗುತ್ತದೆ. ಬಾಯಿಯ ದುರ್ವಾಸನೆಯನ್ನು ತೆಗೆಯಲು ಸಹಾಯ ಮಾಡುತ್ತದೆ.

vtv vitla
vtv vitla
- Advertisement -

Related news

error: Content is protected !!