Saturday, May 4, 2024
spot_imgspot_img
spot_imgspot_img

ಶೈನ್‌ ಶೆಟ್ಟಿ ಮತ್ತು ಸುಕೃತಾ ನಾಗ್‌ ಮದುವೆ ವದಂತಿ; ಸ್ಪಷ್ಟನೆ ನೀಡಿದ ಶೈನ್‌ ಶೆಟ್ಟಿ

- Advertisement -G L Acharya panikkar
- Advertisement -
vtv vitla

ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಸುಕೃತ ನಾಗ್ ಜೊತೆಗಿನ ಮದುವೆಯ ಬಗ್ಗೆ ಗಾಂಧಿನಗರದಲ್ಲಿ ಹಾಟ್ ಟಾಪಿಕ್ ಆಗಿದ್ದರು. ಇದೀಗ ಈ ಮದುವೆಯ ವದಂತಿಯ ಬಗ್ಗೆ ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಶೈನ್ ಶೆಟ್ಟಿ ಹೆಸರು ಸುಕೃತ ನಾಗ್ ಜೊತೆ ಕೇಳಿ ಬರುತ್ತಿದೆ. “ಲಕ್ಷಣ” ನಟಿ ಸುಕೃತ ಜೊತೆ ಶೈನ್ ಶೆಟ್ಟಿ ಮದುವೆ ಅಂತಾ ಸಾಕಷ್ಟು ಸಮಯದಿಂದ ಈ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಕಲಾವಿದರು ಆಗಿರುವ ಕಾರಣ ನನಗೂ ಸುಕೃತ ಅವರಿಗೂ ಪರಿಚಯವಿದೆ ಆದರೆ ಯಾವುದೇ ರೀತಿಯ ಸಂಪರ್ಕವಿಲ್ಲ. ನಾವು ಇದುವರೆಗೂ ಭೇಟಿಯಾಗಿಲ್ಲ. ಯಾವುದೇ ಮಾತುಕತೆಯಿಲ್ಲ. ಈ ಮದುವೆ ಸುದ್ದಿ ಎಲ್ಲಾ ಸುಳ್ಳು, ಆ ತರಹ ಏನು ವಿಚಾರವಿಲ್ಲ ಎಂದಿದ್ದಾರೆ. ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ, ಮತ್ತು ಇದನ್ನೂ ಯಾರು ನಂಬಬೇಡಿ ಎಂದು ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ನಾನು ನನ್ನ ಕೆರಿಯರ್‌ನತ್ತ ಗಮನ ಹರಿಸುತ್ತಿದ್ದೇನೆ. ಮದುವೆಯ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ಮಾತನಾಡಿದ್ದಾರೆ. ಈ ಮೂಲಕ ಸುಕೃತ ನಾಗ್ ಜೊತೆಗಿನ ಮದುವೆ ವದಂತಿಗೆ ಶೈನ್ ಬ್ರೇಕ್ ಹಾಕಿದ್ದಾರೆ.

ಶೈನ್ ಶೆಟ್ಟಿ ಸದ್ಯ ಗಲ್ಲಿ ಕಿಚನ್’ ಬುಸಿನೆಸ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಿದ್ದರೆ, ಸುಕೃತ ನಾಗ್ ಪ್ರಸ್ತುತಲಕ್ಷಣ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

- Advertisement -

Related news

error: Content is protected !!