Tuesday, April 16, 2024
spot_imgspot_img
spot_imgspot_img

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಫೈರಿಂಗ್​

- Advertisement -G L Acharya panikkar
- Advertisement -

ಬೆಳಗಾವಿ: ರಾಜ್ಯದಲ್ಲಿ ಕೋಮು ಸಂಘರ್ಷದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಇದೀಗ ಬೆಳಗಾವಿಯಲ್ಲಿಯೂ ಕೋಮು ದ್ವೇಷದ ಜ್ವಾಲೆ ಹೊತ್ತಿರುವ ಅನುಮಾನ ಮೂಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಹಿಂದೂ ಮುಖಂಡ ಹಾಗೂ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್​ ನಡೆದಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬಳಿಯಲ್ಲಿ ಬೆಳಗಾವಿಯ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್​ ಮೇಲೆ ಅಪರಿಚಿತರು ಫೈರಿಂಗ್​ ನಡೆಸಿದ್ದಾರೆ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರವಿ ರೋಡ್​ ಹಂಪ್​ನಲ್ಲಿ ವಾಹನದ ವೇಗವನ್ನು ಸ್ಲೋ ಮಾಡಿದ ಸಂದರ್ಭದಲ್ಲಿ ಅಪರಿಚಿತರು ಫೈರಿಂಗ್​ ಮಾಡಿದ್ದಾರೆ. ರವಿ ಕೋಕಿತಕರ್​​ನ ಗದ್ದಕ್ಕೆ ಬುಲೆಟ್​ ತಗುಲಿದ್ದು ಬಳಿಕ ಇದೇ ಗುಂಡು ಚಾಲಕನ ಕೈಗೂ ತಗುಲಿದೆ. ಚಾಲಕನ ಕೈಯಲ್ಲಿ ಬುಲೆಟ್​ ಸಿಲುಕಿದ್ದು ರವಿ ಹಾಗೂ ಅವರ ಚಾಲಕ ಇಬ್ಬರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯಲ್ಲಿ ರವಿ ಕೋಕಿತಕರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಇನ್ನು ಶ್ರೀರಾಮ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತಕರ್​ ಮೇಲೆ ಫೈರಿಂಗ್​ ನಡೆಸಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಹಿಂದೂಪರ ಸಂಘಟನಾ ಕಾರ್ಯಕರ್ತರು ರವಿಯನ್ನು ದಾಖಲು ಮಾಡಲಾದ ಖಾಸಗಿ ಆಸ್ಪತ್ರೆಯತ್ತ ಧಾವಿಸಿದ್ದಾರೆ. ಅದೃಷ್ಟವಶಾತ್​ ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಂಡೇಟಿಗೆ ರವಿ ಕಾರು ಚಾಲಕ ಮನೋಜ್​ ದೇಸೂರಕರ್​ರಿಗೂ ಗಾಯಗಳಾಗಿದ್ದು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಯುವಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿದ್ದು ರವಿ ಹಾಗೂ ಚಾಲಕನ ಆರೋಗ್ಯ ವಿಚಾರಿಸಿದ್ದಾರೆ. ಮಾತ್ರವಲ್ಲದೇ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆ ಬಳಿಯಲ್ಲಿ ಒಂದು ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.

- Advertisement -

Related news

error: Content is protected !!