Friday, May 10, 2024
spot_imgspot_img
spot_imgspot_img

ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ ಕಾರ್ಯಚರಿಸುತ್ತಿದ್ದ ಕಲ್ಲು ಗಣಿಗಾರಿಕೆ ಚಟುವಟಿಕೆ ಸ್ಥಗಿತ: ವಿ. ಸುನೀಲ್ ಕುಮಾರ್

- Advertisement -G L Acharya panikkar
- Advertisement -

ಮಂಗಳೂರು: ಕರಾವಳಿಯ ಅತ್ಯಂತ ಪ್ರಸಿದ್ದ ಹಾಗೂ ಪುರಾತನ ದೇವಸ್ಥಾನಗಳಲ್ಲೊಂದಾದ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಸುಪಾಸು ಅಂದರೆ ಕಾವಳ ಮೂಡೂರು ಗ್ರಾಮ ಮತ್ತು ಕಾವಳ ಪಡೂರು ಗ್ರಾಮಗಳಲ್ಲಿ 03 ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಸ್ಥಳೀಯರ ಹಾಗೂ ದೇವಸ್ಥಾನದ ಭಕ್ತಾಧಿಗಳ ದೂರಿನ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ನಡೆಯುತ್ತಿದ್ದ 03 ಕಪ್ಪು ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು, ಕಾವಳ ಮೂಡೂರು ಗ್ರಾಮದ ಸರ್ವೆ ನಂ. 164/2ಪಿ1 ರಲ್ಲಿ 0.50 ಎಕ್ರೆ ಮತ್ತು 172/2ಪಿ1 ರಲ್ಲಿ 0.50 ಎಕ್ರೆ ಒಟ್ಟು 1.00 ಎಕ್ರೆ ಪ್ರದೇಶದಲ್ಲಿ 2007 ರಿಂದ ಗಣಿಗಾರಿಕೆ ನಡೆಯುತ್ತಿದ್ದು, ತನ್ನ ಪರವಾನಿಗೆಯ ವ್ಯಾಪ್ತಿ ಮೀರಿ ಸುಮಾರು 3.28 ಎಕ್ರೆ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿರುವ ಹಿನ್ನೆಲೆಯಲ್ಲಿ ರೂ. 8,12,87,198 ದಂಡ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಚಿಸಿದ್ದು ದಂಡ ಪಾವತಿಸದ ಕಾರಣ ಸದ್ರಿ ಗಣಿಗಾರಿಕೆಯನ್ನು 2021ರ ಡಿಸೆಂಬರ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿದೆ ಹಾಗೂ ಅನಧಿಕೃತ ಗಣಿಗಾರಿಕೆ ನಡೆಸಿರುವ ಮಾಲಿಕರ ವಿರುದ್ಧ ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

vtv vitla
vtv vitla

ಕಾವಳ ಪಡೂರು ಗ್ರಾಮದ ಸ.ನಂ 121/2ಪಿ1 ರಲ್ಲಿ 1.00 ಎಕ್ರೆ ವಿಸ್ತೀರ್ಣದಲ್ಲಿ 2016 ರಿಂದ ಆರಂಭಗೊAಡಿದ್ದ ಗಣಿಗಾರಿಕೆ 20 ವರ್ಷಗಳ ಅವಧಿಗೆ ಪರವಾನಿಗೆ ಇದ್ದರೂ ಕೂಡ ಗುತ್ತಿಗೆದಾರರು ಗೋಮಾಳ ಜಾಗವನ್ನು ಅತಿಕ್ರಮಿಸಿ ಗಣಿಗಾರಿಕೆ ನಡೆಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸದ್ರಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗೂ ಸ.ನಂ 122/3ಪಿ1 ರಲ್ಲಿ 1.00 ಎಕ್ರೆ ಜಮೀನಿನಲ್ಲಿ 2015 ರಿಂದ ಆರಂಭಗೊAಡಿದ್ದ ಗಣಿಗಾರಿಕೆಯನ್ನು ಅದರ ಗುತ್ತಿಗೆದಾರರು ಮೃತಪಟ್ಟಿದ್ದು ಅದೇ ಗಣಿಗಾರಿಕೆ ಪ್ರದೇಶದಲ್ಲಿ ಅನಧಿಕೃತವಾಗಿ ಬೇರೆ ವ್ಯಕ್ತಿ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಗಣಿಗಾರಿಕೆಯನ್ನೂ ಸ್ಥಗಿತಗೊಳಿಸಲಾಗಿದೆ.

ದೇವಸ್ಥಾನದ ಆಸುಪಾಸು ಕಾರ್ಯಚರಿಸುತ್ತಿದ್ದ 03 ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು ಸಾವಿರಾರು ವರ್ಷಗಳ ಇತಿಹಾಸವಿರುವ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಯಾವುದೇ ಧಕ್ಕೆ ಭಾರದ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ದೇವಸ್ಥಾನದ ಪರಿಸರವನ್ನು ಅತೀ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡುವ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಭಕ್ತಾಧಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಸರಕಾರದ ಹಂತದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಾದ ವಿ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!