Thursday, September 24, 2026
spot_imgspot_img
spot_imgspot_img

ಸಜಿಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶದಲ್ಲಿ ಎರಡು ಬಡ ಕುಟುಂಬಗಳಿಗೆ ಚೆಕ್ ಹಸ್ತಾಂತರ

- Advertisement -
- Advertisement -

ಸಜಿಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶದಲ್ಲಿ ನಡೆದ ಯುವಶಕ್ತಿ ಸೇವಾಪಥದ ಎರಡನೇ ಸೇವಾ ಯೋಜನೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಿತ್ತಮಜಲು ಸಾಗರ್ ಆಚಾರ್ಯ ಹಾಗೂ ಕಾಲು ಹಾಗೂ ಸೊಂಟ ಬಲಹೀನತೆಯಿಂದ ಕಷ್ಟಪಡುತ್ತಿರುವ ಸಜಿಪ ಪಡು ಗೋಪಾಲರವರ ಚಿಕಿತ್ಸಾ ಮೊತ್ತಕ್ಕಾಗಿ ಶ್ರೀ ಶಾರದಾ ಪ್ರೆಂಡ್ಸ್ ಸರ್ಕಲ್ (ರಿ) ವಿದ್ಯಾನಗರ, ಶ್ರೀ ಸತ್ಯದೇವತಾ ಯುವಕಸಂಘ ಕಂಚಿಲ, ಸುಭಾಷ್ ಯುವಕಮಂಡಲ(ರಿ) ಸುಭಾಷ್ ನಗರ, ಶ್ರೀ ವೀರಾಂಜನೇಯ ಸೇವಾ ಸಂಘ (ರಿ) ಸಜಿಪ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸೇವಾಸಂಕಲ್ಪ ಸಂಪನ್ನಗೊಂಡಿದೆ.

ಸಂಗ್ರಹಿಸಲ್ಪಟ್ಟ 1 ಲಕ್ಷ ರೂಪಾಯಿಗಳನ್ನು ಚಿಕಿತ್ಸಾ ವೆಚ್ಚವಾಗಿ ತಲಾ 50 ಸಾವಿರ ರೂ. ಗಳಂತೆ ಚೆಕ್ ಅನ್ನು ಷಣ್ಮುಖ ಸುಬ್ರಹ್ಮಣ್ಯ ದೇವರ ಮುಂಭಾಗದಲ್ಲಿ ಅರ್ಚಕರು/ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಂಘಟನಾ ಮಿತ್ರರ ಉಪಸ್ಥಿತಿಯಲ್ಲಿ ಇಬ್ಬರು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಮುಂದಿನ ಮೂರನೇ ಸೇವಾಯೋಜನೆ ಉಪ್ಪಿನಂಗಡಿ ಮಖೆ ಜಾತ್ರೆಯಲ್ಲಿ 23 ನೇ ಬುಧವಾರ ಹಮ್ಮಿಕೊಂಡಿದ್ದು ಸಹೃದಯಿ ದಾನಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!