Thursday, May 2, 2024
spot_imgspot_img
spot_imgspot_img

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮದರಸ ಪಬ್ಲಿಕ್ ಪರೀಕ್ಷೆ ಫಲಿತಾಂಶ; ನೂರುಲ್ ಇಸ್ಲಾಂ ಮದ್ರಸ ನೀರ್ಕಜೆ ಶೇಕಡಾ 100 ಫಲಿತಾಂಶ

- Advertisement -G L Acharya panikkar
- Advertisement -

ವಿಟ್ಲ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2022-23 ನೇ ಸಾಲಿನ ಮದ್ರಸ ವಾರ್ಷಿಕ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ನೂರುಲ್ ಇಸ್ಲಾಂ ಮದ್ರಸ ನೀರ್ಕಜೆ ಪರೀಕ್ಷೆ ಬರೆದ ಎಲ್ಲಾ 12 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿ ಶೇಕಡಾ ನೂರರಷ್ಟು ಪಲಿತಾಂಶ ಪಡೆದಿದೆ.

7 ನೇ ತರಗತಿಯಲ್ಲಿ ಫಾತಿಮತ್ ಜಿಷಾನ 485 ಅಂಕಗಳೊಂದಿಗೆ ಟೋಪ್ ಪ್ಲಸ್ ಹಾಗೂ ವಿಟ್ಲ ರೇಂಜ್ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿದ್ದಾಳೆ. ಹಾಗೂ ಝುಲ್ಫಾ ಮರಿಯಂ 465 , ಮುಹಮ್ಮದ್ ರಾಝೀ 457, ಮುಹಮ್ಮದ್ ಆದಿಲ್ 452, ಅಬ್ದುರ್ರಹ್ಮಾನ್ 443 ಅಂಕಗಳೊಂದಿಗೆ ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿರುತ್ತಾರೆ. ಐದನೇ ತರಗತಿಯಲ್ಲಿ ಆಯಿಶಾ ಮುನೀಬ 473 , ಫಾತಿಮತ್ ಫರ್ಹಾನ 458, ನಫ್ಲಾ ಸಲ್ಮಾ 432 ಅಂಕಗಳೊಂದಿಗೆ ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆ ಹೊಂದಿರುತ್ತಾರೆ. ಹಾಗೂ ಮುಹಮ್ಮದ್ ಫರಾಝ್ 411, ಮುಹಮ್ಮದ್ ಶಾಝಿಬ್ 404, ಮುಹಮ್ಮದ್ ಅನಸ್ 384, ಹಾಗೂ ಸವಾನ 352 ಅಂಕಗಳನ್ನು ಗಳಿಸಿದ್ದಾರೆ.

- Advertisement -

Related news

error: Content is protected !!