- Advertisement -
- Advertisement -


ಪೆಸಿಫಿಕ್ ದ್ವೀಪ ಟೊಂಗಾದ ಸಮುದ್ರದ ಆಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಇದರಿಂದ ಅಮೆರಿಕ, ನ್ಯೂಜಿಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸುನಾಮಿ ಭೀತಿ ಶುರುವಾಗಿದೆ. ಜ್ವಾಲಾಮುಖಿ ಸ್ಫೋಟಗೊಂಡಿದ್ದರಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಸಮುದ್ರದ ಮೇಲೆ ಲಾವಾರಸ ಹರಿದಾಡುತ್ತಿರುವ ವೀಡಿಯೋ ವೈರಲ್ ಆಗಿದೆ.


ಶನಿವಾರ ಹುಂಗ ಟೊಂಗ ಹಾ ಪಾಯಿ ಎಂಬಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇದರ ಬೆನ್ನಲ್ಲೇ ಮಳೆ ಹಾಗೂ ಸಿಡಿಲು ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಯಾಟಲೈಟ್ ಮೂಲಕ ಜ್ವಾಲಾಮುಖಿ ಫೋಟೊಗಳನ್ನು ಸೆರೆಹಿಡಿಯಲಾಗಿದ್ದು, ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಬೂದಿ, ಧೂಳು, ಅನಿಲ ಹರಡಿರುವುದು ಕಂಡು ಬಂದಿದೆ.



- Advertisement -