Wednesday, April 24, 2024
spot_imgspot_img
spot_imgspot_img

ಸಾರ್ವಜನಿಕರ ಭಾರೀ ವಿರೋಧ ಹಿನ್ನೆಲೆ, ಕಟೀಲು ದೇವಸ್ಥಾನದಲ್ಲಿ ಪಾರ್ಕಿಂಗ್‌ ಶುಲ್ಕ ಮತ್ತೆ ಸ್ಥಗಿತ; ಜಿಲ್ಲಾಧಿಕಾರಿಯಿಂದಲೇ ತಡೆ

- Advertisement -G L Acharya panikkar
- Advertisement -
vtv vitla

ಮಂಗಳೂರು: ಸಾರ್ವಜನಿಕರ ಭಾರೀ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಕಟೀಲು ದೇವಸ್ಥಾನದಲ್ಲಿ ಪಾರ್ಕಿಂಗ್‌ ಸಂಗ್ರಹಿಸುವುದಕ್ಕೆ ಮತ್ತೆ ಜಿಲ್ಲಾಧಿಕಾರಿ ತಡೆ ನೀಡಿದ್ದಾರೆ. ಹೀಗಾಗಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಕಾರ್ಯವನ್ನು ಶನಿವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ದಿಢೀರ್ ಆಗಿ ನಿಲ್ಲಿಸಲಾಗಿದೆ.

ಜನವರಿ 1ರಿಂದ ಕಟೀಲು ದೇವಸ್ಥಾನ ಪರಿಸರದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹ ಆರಂಭಗೊಂಡಿತ್ತು. ಆದರೆ, ಕಟೀಲು ಭಾಗದ ಭಕ್ತರು ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಕಳೆದ ಆಗಸ್ಟ್ ತಿಂಗಳಲ್ಲಿ ಇದೇ ರೀತಿ ಪೇ ಪಾರ್ಕಿಂಗ್ ಆರಂಭಿಸುವುದೆಂದು ನಿರ್ಧಾರ ಬಂದಾಗಲೇ ಭಕ್ತರಿಂದ ವಿರೋಧ ಕೇಳಿಬಂದಿತ್ತು ನಂತರ, ಸಂಸದ ನಳಿನ್ ಕುಮಾರ್ ಸೂಚನೆಯಂತೆ ಶುಲ್ಕ ಸಂಗ್ರಹಿಸುವ ನಿರ್ಧಾರ ಮುಂದೂಡಲಾಗಿತ್ತು. ಆದರೆ, ಅದಕ್ಕೂ ಮೊದಲೇ ಪೇ ಪಾರ್ಕಿಂಗ್ ಬಗ್ಗೆ ಮಂಗಳೂರಿನ ವರಾಹ ಅಸೋಸಿಯೇಟ್ಸ್ ಹೆಸರಲ್ಲಿ ಪ್ರವೀಣ್‌ ಎಂಬ ವ್ಯಕ್ತಿ ಪೇ ಪಾರ್ಕಿಂಗ್‌ ಗುತ್ತಿಗೆ ಪಡೆದಿದ್ದರು. ಅದಕ್ಕಾಗಿ ಮುಜರಾಯಿ ಇಲಾಖೆಯಲ್ಲಿ 15 ಲಕ್ಷ ಡಿಪಾಸಿಟ್ ಇಟ್ಟು ಶುಲ್ಕ ಸಂಗ್ರಹಕ್ಕೆ ಮುಂದಾಗಿದ್ದರು. ಗುತ್ತಿಗೆ ಪಡೆದು ಐದಾರು ತಿಂಗಳಾದರೂ ಒಂದೆಡೆ ತನ್ನ ಡಿಪಾಸಿಟ್ ಹಣ ಪೆಂಡಿಂಗ್ ಆಗಿದ್ದರಿಂದ ಗುತ್ತಿಗೆ ವಹಿಸಿಕೊಂಡಿದ್ದ ವ್ಯಕ್ತಿ ಕೋರ್ಟಿಗೆ ಹೋಗಿ ಕಟೀಲು ದೇವಸ್ಥಾನದ ಆಡಳಿತಕ್ಕೆ ನೋಟೀಸ್ ನೀಡಿದ್ದರು.

ಕೋರ್ಟ್ ಸೂಚನೆಯಂತೆ, ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದಕ್ಕೆ ದೇವಸ್ಥಾನದ ಕಮಿಟಿ ಇತ್ತೀಚೆಗೆ ಅನುಮತಿ ನೀಡಿತ್ತು. ಅದರಂತೆ, ಈ ಬಾರಿ ಹಠಾತ್ ಪಾರ್ಕಿಂಗ್ ಶುಲ್ಕ ಆರಂಭಗೊಂಡಿದ್ದು, ದೇವಸ್ಥಾನದ ಆಡಳಿತದ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. ಯಾಕಂದ್ರೆ, ಕಳೆದ ಬಾರಿ ಬ್ರಹ್ಮಕಲಶದ ಸಂದರ್ಭದಲ್ಲಿ ಈಗ ಪಾರ್ಕಿಂಗ್ ಮಾಡಿರುವ ಜಾಗವನ್ನ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಲಾಗಿತ್ತು. ಭೂದಾನ ಯೋಜನೆಯಡಿ ಮುಂಬೈನ ಉದ್ಯಮಿಗಳಿಂದ ಪಡೆದಿದ್ದ ದೇಣಿಗೆ ಮೊತ್ತದಲ್ಲಿ ಜಾಗ ಖರೀದಿಸಲಾಗಿತ್ತು. ಯೋಜನೆಗೆ ಹಲವಾರು ಭಕ್ತರು ದೇಣಿಗೆ ನೀಡಿದ್ದು, ಆ ಹಣದಲ್ಲಿ ಕಟೀಲು ಆಸುಪಾಸಿನಲ್ಲಿ ಎರಡು- ಮೂರು ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಹಾಗಾಗಿ, ಭಕ್ತರ ಹಣದಲ್ಲಿ ಪಡೆದ ಜಾಗದಲ್ಲೀಗ ವಾಹನ ನಿಲ್ಲಿಸಲು ಸಾಮಾನ್ಯ ಭಕ್ತರಿಗೆ ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ಕಟೀಲಿನ ಭಕ್ತರಿಂದಲೇ ವಿರೋಧ ಬಂದಿತ್ತು.

ಕಳೆದ ಬಾರಿ ಜನ ವಿರೋಧ ಬಂದಾಗಲೇ ಸಂಸದ ನಳಿನ್ ಕುಮಾರ್, ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದು ಬೇಡವೆಂದು ಮುಜರಾಯಿ ಇಲಾಖೆಯ ಆಯುಕ್ತರಿಗೂ ತಿಳಿಸಿದ್ದರು. ದೇವಸ್ಥಾನದ ಕಮಿಟಿಗೂ ಸೂಚನೆ ನೀಡಿದ್ದರು. ಆದರೆ ಈ ಬಗ್ಗೆ ಮುಜರಾಯಿ ಇಲಾಖೆಯಿಂದ ಪಾರ್ಕಿಂಗ್‌ ಶುಲ್ಕ ರದ್ದುಪಡಿಸಿ ಮರು ಆದೇಶ ಮಾಡಿರಲಿಲ್ಲ. ಮೊದಲಿಗೆ, ಬೇರೆಲ್ಲ ಸರಕಾರಿ ದೇವಸ್ಥಾನಗಳಲ್ಲಿರುವಂತೆ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸಲು ಆದೇಶ ಮಾಡಿದ್ದೇ ಮುಜರಾಯಿ ಆಯುಕ್ತರಾಗಿದ್ದರಿಂದ ಅವರೇ ರದ್ದುಪಡಿಸಿ ಮರು ಆದೇಶ ನೀಡಬೇಕಿತ್ತು. ಆದರೆ, ಇಲ್ಲಿನ ಜನಪ್ರತಿನಿಧಿಗಳು ರೋಹಿಣಿ ಸಿಂಧೂರಿಗೆ ಒತ್ತಡ ಹೇರಿ ಮರು ಆದೇಶ ಹೊರಡಿಸುವಲ್ಲಿ ವಿಫಲರಾಗಿದ್ದರು. ಆಯುಕ್ತರು ನೀಡಿದ್ದ ಆದೇಶ ಹಾಗೆಯೇ ಉಳಿದುಕೊಂಡಿದ್ದರಿಂದ ಗುತ್ತಿಗೆ ವಹಿಸಿಕೊಂಡಿದ್ದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ತನ್ನ ಕೆಲಸ ಮಾಡಿಸಿಕೊಂಡಿದ್ದರು. ಇದೀಗ ಜಿಲ್ಲಾಧಿಕಾರಿಯವರು ತಡೆಯಾಜ್ಞೆ ನೀಡಿದ್ದಾರೆ, ಇದು ಎಷ್ಟು ದಿನಕ್ಕೆ ಉಳಿದುಕೊಳ್ಳುತ್ತೆ ಕಾದು ನೋಡಬೇಕು.

- Advertisement -

Related news

error: Content is protected !!