Saturday, June 20, 2026
spot_imgspot_img
spot_imgspot_img

ಸೀಮೆಎಣ್ಣೆ ಕುಡಿದು ವಿದ್ಯಾರ್ಥಿ ಮೃತ್ಯು!!

- Advertisement -
- Advertisement -

ವಿದ್ಯಾರ್ಥಿಯೋರ್ವ ಸೀಮೆಎಣ್ಣೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ನೈಮರ್ಮುಲಾ ತನ್ಸಿಯುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಉಮರ್ ಅಫ್ರಾಬುದ್ದೀನ್ (15) ಪೆರುಂಬಳ ಚಾಳ ಜೆಟ್ಟಿ ಅಶ್ರಫ್ ಹಾಗೂ ಫಾಮಿನಿಯಾ ದಂಪತಿಯ ಪುತ್ರ ಸಾವನ್ನಪ್ಪಿದ ವಿದ್ಯಾರ್ಥಿ.

ಹಲವು ದಿನಗಳಿಂದ ತೀವ್ರ ಅಸ್ವಸ್ಥನಾಗಿದ್ದ ಉಮರ್ ಅಫ್ರಾಬುದ್ದೀನ್ ಸೀಮೆಎಣ್ಣೆ ಸೇವಿಸಿದ್ದಾಗಿ ಪತ್ತೆಯಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.

ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಕಷ್ಟ ಕಾಣಿಸಿಕೊಂಡ ಕಾರಣ ಬಾಲಕ ಸೀಮೆಎಣ್ಣೆ ಸೇವಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!