Friday, May 3, 2024
spot_imgspot_img
spot_imgspot_img

ಸುಗಮವಾಗಿ‌‌ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪ್ರಥಮ ಭಾಷೆ ಪರೀಕ್ಷೆಗೆ ಎಷ್ಟು ವಿದ್ಯಾರ್ಥಿಗಳು ಗೈರು.??

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 98 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು. ಮೊದಲ ದಿನ ನಡೆದ ಪ್ರಥಮ ಭಾಷೆ ಪರೀಕ್ಷೆಗೆ ಒಟ್ಟು 244 ಜನರು ಗೈರಾಗಿದ್ದರು ಎಂದು ಡಿಡಿಪಿಐ ದಯಾನಂದ ನಾಯಕ್ ತಿಳಿಸಿದ್ದಾರೆ.

ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ ಒಟ್ಟು 28,506 ವಿದ್ಯಾರ್ಥಿಗಳಲ್ಲಿ 28,262 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಪುತ್ತೂರು ಸೇರಿ ಮೂರು ಖಾಸಗಿ ಕೇಂದ್ರಗಳಲ್ಲಿ ಒಟ್ಟು 729 ಜನರು ಹೆಸರು ನೋಂದಾಯಿಸಿದ್ದರು. ಅವರಲ್ಲಿ ಒಟ್ಟು 713 ಜನರು ಪರೀಕ್ಷೆಗೆ ಹಾಜರಾಗಿದ್ದಾರೆ.

ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ 17, ಬೆಳ್ತಂಗಡಿ ತಾಲ್ಲೂಕಿನ 14, ಮಂಗಳೂರು ಉತ್ತರದಲ್ಲಿ 19, ಮಂಗಳೂರು ದಕ್ಷಿಣದಲ್ಲಿ 22, ಮೂಡುಬಿದಿರೆ ತಾಲ್ಲೂಕಿನಲ್ಲಿ ಐದು, ಪುತ್ತೂರು ತಾಲ್ಲೂಕಿನ 15 ಹಾಗೂ ಸುಳ್ಯ ತಾಲ್ಲೂಕಿನ ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾಣಿಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು

- Advertisement -

Related news

error: Content is protected !!