Tuesday, June 9, 2026
spot_imgspot_img
spot_imgspot_img

ಸುಟ್ಟುಹೋದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆ!!

- Advertisement -
- Advertisement -

ಕೋಲಾರ: ಅರ್ಧಂಬರ್ಧ ಸುಟ್ಟುಹೋದ ಸ್ಥಿತಿಯಲ್ಲಿ ದೇಹವೊಂದು ಪತ್ತೆಯಾದ ಘಟನೆ ತಾಲ್ಲೂಕಿನ ಮುದುವಾಡಿ ಬಳಿಯ ತೊಂಡಾಲ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಶ್ರೀನಿವಾಸಪುರದ ನಿವಾಸಿ ಶೋಭಾ (37) ಎಂದು ಗುರುತಿಸಲಾಗಿದೆ.

ಪತಿ ವೆಂಕಟರಮಣ ಶೋಭಾ ಅವರನ್ನು 2ನೇ ಮದುವೆಯಾಗಿದ್ದು, ಶೋಭಾ ಶ್ರೀನಿವಾಸಪುರದಲ್ಲೇ ಬ್ಯೂಟಿಪಾರ್ಲರ್ ನಡೆಸುತ್ತಿದ್ದರು.

ಸುಟ್ಟುಹೋದ ಸ್ಥಿತಿಯಲ್ಲಿದ್ದ ದೇಹದಲ್ಲಿ ಮಾಂಗಲ್ಯ ಸರ ಪತ್ತೆಯಾಗಿದ್ದು, ಮೃತದೇಹ ಮಹಿಳೆಯದ್ದೇ ಎಂಬುದು ತಿಳಿದುಬಂದಿದೆ. ಕಿಡಿಗೇಡಿಗಳು ಮಹಿಳೆಯನ್ನು ಕೊಲೆ ಮಾಡಿ, ಸುಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದಾರೆ.

- Advertisement -

Related news

error: Content is protected !!