Sunday, April 28, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ಮನೆಯಿಂದ ಹೊರ ಹೋದ ಗ್ರಾಮ ಪಂಚಾಯತ್ ಸದಸ್ಯೆ ನಾಪತ್ತೆ

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಮನೆಯಿಂದ ಹೊರ ಹೋದ ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ಐನೆಕಿದು ಗ್ರಾಮದ ಮೂಕಮಲೆ ನಿವಾಸಿ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲೆ(33) ಎಂದು ಗುರುತಿಸಲಾಗಿದೆ.

ಭಾರತಿಯವರು ಪಂಚಾಯತ್ ಸದಸ್ಯೆಯಾಗಿದ್ದು, ದೂರುದಾರ ಶಶಿಕಾಂತ್ ಅವರು ಕೆಲಸದಿಂದ ಬಂದು ತಾಯಿ ಮತ್ತು ಅತ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಳಿ ಮನೆಗೆ ಬಂದಾಗ ಪತ್ನಿ ಇಲ್ಲದಿರುವುದನ್ನು ಕಂಡು ಮಕ್ಕಳಲ್ಲಿ ವಿಚಾರಿಸಿದ್ದಾರೆ ಎನ್ನಲಾಗಿದ್ದು, ಬಳಿಕ ಫೋನ್ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ನೆರೆ ಮನೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದರು.

ರಾತ್ರಿಯಾದರು ಮಹಿಳೆಯ ಬಗ್ಗೆ ಎಲ್ಲಿಯೂ ಸುಳಿವು ಸಿಗದೇ ಇದ್ದಾಗ ಠಾಣೆಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!