Wednesday, May 1, 2024
spot_imgspot_img
spot_imgspot_img

ಸುಳ್ಯ: ಕೊಚ್ಚಿಹೋದ ಮರದ ಸೇತುವೆ; ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ ನಿವಾಸಿಗಳು

- Advertisement -G L Acharya panikkar
- Advertisement -

ಸುಳ್ಯ: ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದಸೇತುವೆ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.

ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಿದ್ದರು.

ಪ್ರತಿ ವರ್ಷ ಮಳೆಗೆ ಮೊದಲು ಈ ಭಾಗದ ನಿವಾಸಿಗಳೇ ಸೇರಿ ಸ್ಥಳೀಯವಾಗಿ ಸಿಗುವ ಮರ, ಬಿದಿರು, ಬಳ್ಳಿಗಳನ್ನು ಬಳಸಿ ಕಾಲು ಸೇತುವೆ ದುರಸ್ತಿ ಪಡಿಸಿ ಜೀವನ ಕಳೆಯುತ್ತಿದ್ದಾರೆ. ಈ ಭಾರಿ ಸುರಿದ ವಿಪರೀತ ಮಳೆಗೆ ಹೆಚ್ಚಿನ ಪ್ರವಾಹ ಬಂದು ಕಾಲು ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಲ್ಲಿನ 11 ಮನೆಗಳಿಗೆ ಇತರ ಪ್ರದೇಶಗಳಿಗೆ ಸಂಪರ್ಕಿಸಲು ಅಸಾಧ್ಯವಾಗಿದೆ.

- Advertisement -

Related news

error: Content is protected !!