Thursday, June 18, 2026
spot_imgspot_img
spot_imgspot_img

ಕಾಸರಗೋಡು: ಹಾವು ಕಡಿತ; ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರು-ಬೈಕ್ ನಡುವೆ ಅಪಘಾತ- ವ್ಯಕ್ತಿ ಮೃತ್ಯು..!!

- Advertisement -
- Advertisement -
vtv vitla

ಕಾಸರಗೋಡು: ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರು-ಬೈಕ್ ನಡುವೆ ಅಪಘಾತಗೊಂಡು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಆದೂರು ಸಮೀಪದ ಕೊಟ್ಟೂರು ನೆಕ್ರಂಪಾರೆಯಲ್ಲಿ ನಡೆದಿದೆ.

ಬೆಳ್ಳೂರು ಅಡ್ವಾಳದ ಕೃಷ್ಣನ್‌ (50) ಮೃತ ಪಟ್ಟವರು. ರಾತ್ರಿ ಕೃಷ್ಣ ಅವರಿಗೆ ಮನೆ ಸಮೀಪ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಸಂಬಂಧಿ ರಮೇಶ್‌ರವರ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ನೆಕ್ರಂಪಾರೆಯಲ್ಲಿ ಬೈಕ್‌-ಕಾರು ನಡುವೆ ಅಪಘಾತ ಸಂಭವಿಸಿದೆ

ಅಪಘಾತದ ರಭಸಕ್ಕೆ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ಇಬ್ಬರನ್ನು ಸ್ಥಳಿಯರು ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣನ್ ಅವರು ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾರೆಯೇ ಅಥವಾ ಹಾವು ಕಚ್ಚಿದ ವಿಷದಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಿಳಿಯಬೇಕಾಷ್ಟೆ.

ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ನೀಡಲಾಗಿದೆ.

- Advertisement -

Related news

error: Content is protected !!