Tuesday, April 30, 2024
spot_imgspot_img
spot_imgspot_img

ಸುಳ್ಯ: ತಾಲೂಕಿನಲ್ಲಿ ಮತ್ತೊಮ್ಮೆ ಜಲಸ್ಫೋಟ; ರಾತ್ರೋರಾತ್ರಿ ಊರು ತೊರೆದ ಗ್ರಾಮಸ್ಥರು

- Advertisement -G L Acharya panikkar
- Advertisement -
astr

ಸುಳ್ಯ: ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಜಲಪ್ರವಾಹ ಉಂಟಾಗಿದ್ದು, ಅತ್ತ ಮಡಿಕೇರಿ ತಾಲೂಕಿನ ಸಂಪಾಜೆ, ಕೊಯನಾಡು ಭಾಗದಲ್ಲೂ ಭಾರೀ ಪ್ರವಾಹ ಉಂಟಾಗಿದೆ. ಭಾರೀ ಜಲಸ್ಫೋಟದಿಂದಾಗಿ ರಾತ್ರೋರಾತ್ರಿ ಗ್ರಾಮಸ್ಥರು ಜಾಗ ತೊರೆದಿದ್ದಾರೆ.

ಇನ್ನು ಕಲ್ಮಕಾರಿನ ಗುಳಿಕ್ಕಾನ, ಹಾಗೂ ಕಡಮಕಲ್ ಎಸ್ಟೇಟ್ ಭಾಗದಲ್ಲಿ ಜಲಸ್ಫೋಟವಾಗಿದ್ದು, ಭಾರೀ ಪ್ರಮಾಣದ ಮರಗಳು ನೀರಿನ ಅಬ್ಬರಕ್ಕೆ ಕೊಚ್ಚಿ ಬಂದಿವೆ. ಅಲ್ಲದೇ ಕೊಯನಾಡು ಭಾಗದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ರಾತ್ರಿ ವೇಳೆ ಐದಾರು ಮನೆಗಳಿಗೆ ನೀರು ನುಗ್ಗಿದೆ.

ಕಿಂಡಿ ಅಣೆಕಟ್ಟಿಗೆ ಮರಗಳು ಬಂದು ನಿಂತಿದ್ದು, ನೀರು ತಗ್ಗು ಪ್ರದೇಶಗಳತ್ತ ನುಗ್ಗಿದೆ.

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲೂ ಭೂಕುಸಿತ ಹಾಗೂ ಜಲಸ್ಫೋಟ ಸಂಭವಿಸಿದ್ದು, ಹಲವು ಮನೆಗಳು ಸಂಪರ್ಕ ಕಳೆದುಕೊಂಡಿವೆ. ದಬ್ಬಡ್ಕದ ಹೊಳೆ ಉಕ್ಕಿ ಹರಿದಿದ್ದು, ಗುಡ್ಡದಿಂದ ನೀರು ಕೊರೆದುಕೊಂಡು ಬಂದಿರುವ ಮಾಹಿತಿ ಲಭಿಸಿದೆ. ಈಗಾಗಲೇ ಸ್ಥಳೀಯ ಅಧಿಕಾರಿಗಳು ಅವಘಡ ಸಂಭವಿಸಿದ ಸ್ಥಳಗಳತ್ತ ತೆರಳಿದ್ದಾರೆ.

- Advertisement -

Related news

error: Content is protected !!