Thursday, May 2, 2024
spot_imgspot_img
spot_imgspot_img

ಸುಳ್ಯ: ಹಿಂದೂ ಎಂದು ನಂಬಿಸಿ ಮುಸ್ಲಿಂ ಯುವಕನಿಂದ ಅತ್ಯಾಚಾರಕ್ಕೆ ಯತ್ನ; ಆರೋಪಿ ಅರೆಸ್ಟ್!

- Advertisement -G L Acharya panikkar
- Advertisement -

ಸುಳ್ಯ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅನ್ಯಕೋಮಿನ ಯುವಕನೋರ್ವ ಹಿಂದೂ ಯುವಕನೆಂದು ನಂಬಿಸಿ ಆಕೆಯನ್ನು ಬಲವಂತದಿಂದ ಸುತ್ತಾಡಲು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ವಂಚನೆಗೊಳಗಾದ ಯುವತಿ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮೂಲತಃ ಮಡಿಕೇರಿಯವನು. ಆತ ಕಳೆದ 2 ತಿಂಗಳ ಹಿಂದೆ ಹಿಂದೂ ಯುವತಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ಕೌಶಲ್ ಎಂಬ ಹೆಸರಿನಿಂದ ಆಕೆಯಜೊತೆ ಪರಿಚಯ ಬೆಳೆಸಿಕೊಂಡಿದ್ದನು.

ಆತ ನ.11 ರಂದು ಸುಳ್ಯಕ್ಕೆ ಬರುವಂತೆ ಒತ್ತಾಯಿಸಿದ್ದನು. ಯುವತಿ ಹಿಂದೂ ಯುವಕನೆಂದು ನಂಬಿ ಆತನ ಒತ್ತಾಯಕ್ಕೆ ಮಣಿದು ಸುಳ್ಯಕ್ಕೆ ಬಂದಿದ್ದು, ಅಲ್ಲಿಂದ ಬೈಕಿನಲ್ಲಿ ಕುಳಿತುಕೊಳ್ಳುವಂತೆ ಹೇಳಿ ಮಡಿಕೇರಿ ಕಡೆಗೆ ಬೈಕನ್ನು ಚಲಾಯಿಸಿದ್ದಾನೆ. ನಾನು ಮಡಿಕೇರಿಗೆ ಬರುವುದಿಲ್ಲ ಎಂದು ಹೇಳಿದರೂ ಆತನು ಬೈಕನ್ನು ರಭಸದಿಂದ ಮಡಿಕೇರಿಗೆ ಚಲಾಯಿಸಿದ್ದು, ಅಲ್ಲಿ ಪಾರ್ಕಿಗೆ ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸಿರುವುದಲ್ಲದೆ ಯುವತಿ ಕೈಯನ್ನೆಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ.

ಆತನನ್ನು ವಿರೋಧಿಸಿದಾಗ ನಿನ್ನನ್ನು ಕೊಲ್ಲುತ್ತೇನೆ ಎಂದು ಜೀವ ಬೆದರಿಕೆಯೊಡ್ಡಿದಲ್ಲದೇ ನಾನು ಹಿಂದೂ ಅಲ್ಲ ಮುಸ್ಲಿಂ ನನ್ನ ಹೆಸರು ತಸ್ಲೀಮ್ ಎಂದು ಹೇಳಿದ್ದಾನೆ. ನನ್ನನ್ನು ಬಿಟ್ಟು ಹೋದರೆ ನಮ್ಮಿಬ್ಬರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ.

ನಾನು ಯಾರಲ್ಲಿಯೂ ಈ ಬಗ್ಗೆ ಹೇಳುವುದಿಲ್ಲ. ನನ್ನನ್ನು ಮತ್ತೆ ನನ್ನ ಊರಿಗೆ ಬಿಡು ಎಂದು ಕೇಳಿಕೊಂಡಾಗ ಆತ ಒಪ್ಪಿ ಮತ್ತೆ ಯುವತಿನ್ನು ಸುಳ್ಯಕ್ಕೆ ಕರೆತಂದು ಬಿಟ್ಟಿದ್ದಾನೆ ಎಂದು ವಂಚನೆಗೊಳಗಾದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!