Sunday, May 5, 2024
spot_imgspot_img
spot_imgspot_img

ಸೋಷಿಯಲ್ ಮೀಡಿಯಾ ಪ್ರೊಫೈಲ್ ಚಿತ್ರಗಳನ್ನು ರಾಷ್ಟ್ರಧ್ವಜಕ್ಕೆ ಬದಲಿಸಿಕೊಳ್ಳಲು ಪ್ರಧಾನಿ ಮೋದಿ ಕರೆ

- Advertisement -G L Acharya panikkar
- Advertisement -

ನವದೆಹಲಿ: ಸೋಷಿಯಲ್ ಮೀಡಿಯಾ ಪ್ರೊಫೈಲ್​ ಚಿತ್ರಗಳನ್ನು ರಾಷ್ಟ್ರಧ್ವಜಕ್ಕೆ ಬದಲಿಸಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಮನ್​ಕಿ ಬಾತ್​ನಲ್ಲಿ ಈ ವಿಷಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್​ 2ರಿಂದ 15ನೇ ಆಗಸ್ಟ್​ವರೆಗೆ ನಾವೆಲ್ಲರೂ ನಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್ ಚಿತ್ರಗಳನ್ನು ಬದಲಿಸಿಕೊಳ್ಳೋಣವೇ? ತ್ರಿವರ್ಣದ ನಮ್ಮ ರಾಷ್ಟ್ರಧ್ವಜದೊಂದಿಗೆ ನಮ್ಮ ಪ್ರೊಫೈಲ್ ಚಿತ್ರ ಬರುವಂತೆ ಮಾಡೋಣ ಎಂದು ಕರೆ ನೀಡಿದ್ದಾರೆ.

ಭಾರತದ ವಿವಿಧೆಡೆ ಹಲವು ರೈಲು ನಿಲ್ದಾಣಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ನಾಮಕಾರಣ ಮಾಡಲಾಗಿದೆ. ಇವು ದೇಶದ ಸ್ವಾತಂತ್ರ್ಯ ಹೋರಾಟದ ಕಥೆ ಹೇಳುತ್ತವೆ. ನಾನು ವಿದ್ಯಾರ್ಥಿಗಳನ್ನು ಇಂಥ ರೈಲು ನಿಲ್ದಾಣಗಳಿಗೆ ಕರೆದೊಯ್ಯಬೇಕೆಂದು ಶಿಕ್ಷಕರನ್ನು ಆಗ್ರಹಿಸುತ್ತೇನೆ ಎಂದರು.

ಔಷಧ ಸಂಶೋಧನೆ ಕುರಿತು ಮಾತನಾಡಿರುವ ಅವರು, ಕೊರೊನಾ ಸಂಕಷ್ಟವು ಭಾರತೀಯ ಪದ್ಧತಿಯ ಔಷಧಿಗಳ ಸಂಶೋಧನೆಯಲ್ಲಿಯೂ ಹಲವು ಮಹತ್ವದ ಮೈಲಿಗಲ್ಲುಗಳಿಗೆ ಕಾರಣವಾಯಿತು. ಆಯುಷ್​ ಇಲಾಖೆಯು ನಿರ್ವಹಿಸುವ ಚಿಕಿತ್ಸಾ ಪದ್ಧತಿಯ ಬಗ್ಗೆ ಇಡೀ ಜಗತ್ತು ಗಮನ ಹರಿಸಿತು. ಆಯುರ್ವೇದದ ಬಗ್ಗೆ ಎಲ್ಲರೂ ಗಮನಹರಿಸಲು ಆರಂಭಿಸಿದರು ಎಂದರು.

ನಿಮ್ಮ ಇಷ್ಟದ ಹ್ಯಾಷ್​ಟ್ಯಾಗ್​ಗಳೊಂದಿಗೆ ಭಾರತದ ಅತ್ಯುತ್ತಮ ಸ್ಥಳೀಯ ಮೇಳ ಅಥವಾ ಸಂಪ್ರದಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ಸಂಸ್ಕೃತಿ ಸಚಿವಾಲಯವು ಇಂಥ ಚಿತ್ರಗಳನ್ನು ಹಂಚಿಕೊಳ್ಳುವವರಿಗಾಗಿ ಸ್ಪರ್ಧೆಯನ್ನು ಆಯೋಜಿಸಿದೆ. ಅತ್ಯುತ್ತಮ ಚಿತ್ರ ಹಂಚಿಕೊಳ್ಳುವವರಿಗೆ ಬಹುಮಾನವನ್ನೂ ಕೊಡಲಿದೆ ಎಂದು ಹೇಳಿದರು.

- Advertisement -

Related news

error: Content is protected !!