Friday, March 29, 2024
spot_imgspot_img
spot_imgspot_img

ಸಾವಿರಾರು ವರ್ಷಗಳ ಅಮೂಲ್ಯ ಭಾರತೀಯ ಕಲಾಕೃತಿಗಳನ್ನು ಮರಳಿಸಿದ USA; ಮೋದಿ ಸಂತಸ

- Advertisement -G L Acharya panikkar
- Advertisement -

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಅಭೂತಪೂರ್ವ ಬೆಳವಣಿಗೆಯೊಂದು ಕಂಡುಬಂದಿದೆ. ಅದೇನೆಂದರೆ ಅಮೆರಿಕಕ್ಕೆ ಈ ಹಿಂದೆ ಭಾರತದಿಂದ ಸಾಗಿಸಲ್ಪಟ್ಟಿರುವ 157 ಪುರಾತನ ಕಲಾಕೃತಿಗಳು ಭಾರತಕ್ಕೆ ವಾಪಸ್‌ ಬಂದಿದೆ.

ಕಂಚಿನ ನಟರಾಜ ಸೇರಿದಂತೆ ಭಾರತದ ಐತಿಹಾಸಿಕ ಪರಂಪರೆಯುಳ್ಳ ಹಲವಾರು ಕಲಾಕೃತಿಗಳನ್ನು ಇದು ಒಳಗೊಂಡಿದೆ. 10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 12ನೇ ಶತಮಾನದ ತಾಮ್ರದ ನಟರಾಜನ ವಿಗ್ರಹ, 11 ಮತ್ತು 14ನೇ ಶತಮಾನದ ಪುರಾತತ್ವ ವಸ್ತುಗಳು ಕಲಾಕೃತಿಗಳು, ಟೆರಾಕೋಟಾ ಹೂದಾನಿ ಸೇರಿದಂತೆ 45 ಪ್ರಾಚೀನ ವಸ್ತುಗಳು ಇದರಲ್ಲಿದ್ದು, ಅಮೆರಿಕವು ಇದನ್ನು ಭಾರತಕ್ಕೆ ಹಸ್ತಾಂತರಿಸಿದೆ.

ಈ ವಸ್ತುಗಳು ಹೆಚ್ಚಾಗಿ 11 ನೇ ಶತಮಾನದಿಂದ 14 ನೇ ಶತಮಾನದ ಅವಧಿಗೆ ಸೇರಿವೆ. 157 ಕಲಾಕೃತಿಗಳಲ್ಲಿ ಈ ವಸ್ತುಗಳು ಹೆಚ್ಚಾಗಿ 11 ನೇ ಶತಮಾನದಿಂದ 14 ನೇ ಶತಮಾನದ ಅವಧಿಗೆ ಸೇರಿವೆ. 157 ಕಲಾಕೃತಿಗಳಲ್ಲಿ ಅರ್ಧದಷ್ಟು ಕಲಾಕೃತಿಗಳು (71) ಸಾಂಸ್ಕೃತಿಕವಾದರೆ, ಉಳಿದ ಅರ್ಧವು ಹಿಂದೂ ಧರ್ಮ (60), ಬೌದ್ಧ ಧರ್ಮ (16) ಮತ್ತು ಜೈನ ಧರ್ಮಕ್ಕೆ (9) ಸಂಬಂಧಿಸಿದ ಪ್ರತಿಮೆಗಳು ಇವೆ.


- Advertisement -

Related news

error: Content is protected !!