Friday, May 17, 2024
spot_imgspot_img
spot_imgspot_img

ಸೌಂದರ್ಯ ವೃದ್ಧಿಸುವಲ್ಲಿ ಮರಗೆಣಸಿನ ಪಾತ್ರ

- Advertisement -G L Acharya panikkar
- Advertisement -

ಮರಗೆಣಸನ್ನು ನೀವು ನೋಡಿರುತ್ತೀರಿ. ಇದರಿಂದ ಬಹಳ ರುಚಿಕರವಾದ ಖಾದ್ಯವನ್ನು ತಯಾರಿಸಬಹುದು. ಗೆಣಸಿನಲ್ಲಿ ಎರಡು ವಿಧಗಳಿವೆ ಸಿಹಿಗೆಣಸು ಮತ್ತು ಕಹಿಗೆಣಸು. ಕಹಿ ಗೆಣಸನ್ನು ಮರಗೆಣಸು ಎನ್ನುತ್ತಾರೆ. ಇದು ಹೆಚ್ಚಿನ ಮಟ್ಟದ ಸೈನೈಡ್ ಅನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಬೇಯಿಸುವ ಮೊದಲು ಚೆನ್ನಾಗಿ ತೊಳೆದು , ತೊಗಟೆಯನ್ನು ತೆಗೆಯಬೇಕು. ಇದು ಎಲ್ಲಾ ಹಾನಿಕಾರಕ ವಿಷಗಳನ್ನು ತೆಗೆದುಹಾಕುತ್ತದೆ. ನಂತರ ನೀವು ಅದನ್ನು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಬಹುದು. ನಾವಿಂದು ಮರಗೆಣಸನ್ನು ಯಾವ ರೀತಿ ನಮ್ಮ ಸೌಂದರ್ಯವನ್ನು ವೃದ್ದಿಸಲು ಬಳಸಬಹುದು ಎನ್ನುವುದನ್ನು ತಿಳಿಸಿಕೊಡಲಿದ್ದೇವೆ.

ಮರಗೆಣಸಿನ ಸ್ಕ್ರಬ್

ಮರಗೆಣಸಿನ ಸಿಪ್ಪೆಯನ್ನು ಸ್ಕಿನ್ ಎಕ್ಸ್ ಫೋಲಿಯೇಟರ್ ಆಗಿ ಬಳಸಬಹುದು. ನೀವು ಮರಗೆಣಸಿನ ಸಿಪ್ಪೆಯನ್ನು ತೆಗೆದು, ಆ ಸಿಪ್ಪೆಯನ್ನು ತಾಜಾ ಪೇಸ್ಟ್ ತಯಾರಿಸಿ ಅದನ್ನು ಸ್ಕ್ರಬ್ ಆಗಿ ಬಳಸಬಹುದು. ಆ ಪೇಸ್ಟ್‌ನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಉಜ್ಜಿ, ನಂತರ ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಮೂರು ಬಾರಿ ನೀವು ಹೀಗೆ ಸ್ಕ್ರಬ್ ಮಾಡಬೇಕು.

​ಚರ್ಮವನ್ನು ಹೈಡ್ರೇಟ್ ಮಾಡುತ್ತದೆ

ಮರಗೆಣಸು ನಿಮ್ಮ ಚರ್ಮದ ಟೋನ್ ಅನ್ನು ಹೈಡ್ರೇಟ್ ಮಾಡುವುದರ ಜೊತೆಗೆ ನಯವಾಗಿ ಮತ್ತು ಕೋಮಲವಾಗಿರಿಸುತ್ತದೆ. ಇದಕ್ಕಾಗಿ ನೀವು ಮನೆಯಲ್ಲಿ ಮರಗೆಣಸಿನ ಫೇಸ್‌ಮಾಸ್ಕ್‌ ಸಿದ್ಧಪಡಿಸ ಬಹುದು. ಮರಗೆಣಸನ್ನು ಪೇಸ್ಟ್‌ ರೀತಿ ತಯಾರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ಆಲಿವ್ ಎಣ್ಣೆಯನ್ನು ಮಿಕ್ಸ್‌ ಮಾಡಿ. ಮುಖಕ್ಕೆ ಹಚ್ಚಿಕೊಳ್ಳಿ.

​ಮುಖದಲ್ಲಿನ ಕಲೆಗಳನ್ನು ತೆಗೆದುಹಾಕುತ್ತದೆ

ಮರಗೆಣಸು ತೊಳೆದ ನೀರನ್ನು ದಿನಕ್ಕೆ ಎರಡು ಬಾರಿ ನೀವು ಕಲೆಗಳಿರುವ ಪ್ರದೇಶದ ಮೇಲೆ ನಿಧಾನವಾಗಿ ಹಚ್ಚಿದರೆ ಕ್ರಮೇಣ ಗಾಯದ ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

​ಫೇಸ್ ಮಾಸ್ಕ್

ಮರಗೆಣಸು ಉತ್ತಮ ಫೇಸ್ ಮಾಸ್ಕ್ ಆಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮ ಫೇಸ್ ಮಾಸ್ಕ್ ಅನ್ನು ತಯಾರಿಸುವ ಮೊದಲು, ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದು ನಿಮ್ಮ ತ್ವಚೆಯ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಮರಗೆಣಸಿನ ಫೇಸ್‌ಮಾಸ್ಕ್‌ ಸುಲಭವಾಗಿ ಹೀರಲ್ಪಡುತ್ತದೆ ಮತ್ತು ನಿಮ್ಮ ಚರ್ಮದ ವಿನ್ಯಾಸ ಮತ್ತು ಸ್ಥಿತಿಯನ್ನು ಸುಧಾರಿಸುತ್ತದೆ.

ಅದನ್ನು ಮುಖವನ್ನು ಹಚ್ಚಿದ ನಂತರ, ಅದು ಸಂಪೂರ್ಣವಾಗಿ ಒಣಗುವವರೆಗೆ ಕಾಯಿರಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಮುಖದ ರಂಧ್ರಗಳು ಮುಚ್ಚಲ್ಪಡುತ್ತವೆ. ವಾರದಲ್ಲಿ ಮೂರು ಬಾರಿ ಇದನ್ನು ಮಾಡುವುದರಿಂದ ಚರ್ಮವು ಹೊಳಪನ್ನು ಪಡೆಯುತ್ತದೆ.

ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ

ನಿಮ್ಮ ಕೂದಲು ಚೆನ್ನಾಗಿ ಬೆಳೆಯಬೇಕಾದರೆ ಮರಗೆಣಸಿನ ಬೇರುಗಳು ಮತ್ತು ಎಲೆಗಳನ್ನು ತಾಜಾ ಪೇಸ್ಟ್ ಮಾಡಿ ಬಳಸಬಹುದು. ಇದನ್ನು ನೀವು ತಲೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಎಣ್ಣೆ ಸವರಿದ ಕೂದಲಿನ ಮೇಲೆ ಹಚ್ಚಬಹುದು. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲಿನ ಬೆಳವಣಿಗೆಯಲ್ಲಿ ಬದಲಾವಣೆಗಳನ್ನು ಕಾಣಬಹುದು.

- Advertisement -

Related news

error: Content is protected !!