Sunday, April 28, 2024
spot_imgspot_img
spot_imgspot_img

ಸ್ನಾನಕ್ಕೆ ಬಂದಿದ್ದ ಬಾಲಕನನ್ನು ನುಂಗಿದ ಮೊಸಳೆ; ಹೊಟ್ಟೆ ಕತ್ತರಿಸಿ ರಕ್ಷಿಸಲು ಮುಂದಾದವರಿಗೆ ಕಾದಿತ್ತು ಶಾಕ್

- Advertisement -G L Acharya panikkar
- Advertisement -

ನದಿಯಲ್ಲಿ ಸ್ನಾನ ಮಾಡುತ್ತಿದ್ದ ಹತ್ತರ ಹರೆಯದ ಬಾಲಕನನ್ನು ಮೊಸಳೆಯೊಂದು ನುಂಗಿದೆ..!? ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮೊಸಳೆಯನ್ನು ಸೆರೆಹಿಡಿದು ಅದರ ಹೊಟ್ಟೆ ಕತ್ತರಿಸಿ ಬಾಲಕನನ್ನು ಹೊರಕ್ಕೆ ತೆಗೆಯಲು ಮುಂದಾಗಿದ್ದರು. ಆದರೆ ಅಲ್ಲಿಗೆ ಬಂದ ಅಧಿಕಾರಿಗಳು ಗ್ರಾಮಸ್ಥರನ್ನು ವಿರೋಧಿಸಿ ಮೊಸಳೆಯನ್ನು ರಕ್ಷಣೆ ಮಾಡಿದ್ದಾರೆ..!

ಮಧ್ಯಪ್ರದೇಶದ ಶಿಯೋಪುರ್‌ನಲ್ಲಿರೋ ಚಂಬಲ್‌ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕನನ್ನು ಮೊಸಳೆ ನುಂಗಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಈ ವಿಷಯ ಗ್ರಾಮದ ತುಂಬೆಲ್ಲಾ ಹಬ್ಬಿ ಗ್ರಾಮಸ್ಥರೆಲ್ಲ ನದಿಯ ಬಳಿ ಜಮಾಯಿಸಿದ್ದಾರೆ. ಬಲೆ, ಕೋಲು ಹಾಗೂ ಹಗ್ಗದ ಸಹಾಯದಿಂದ ಹೇಗೋ ಹರಸಾಹಸ ಪಟ್ಟು ಮೊಸಳೆಯನ್ನು ಹಿಡಿದು ದಡಕ್ಕೆ ಎಳೆದು ತಂದಿದ್ದಾರೆ.

ಮೊಸಳೆಯ ಹೊಟ್ಟೆ ಸೇರಿದ್ದ ಬಾಲಕ ಇನ್ನೂ ಬದುಕಿದ್ದಾನೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಹಾಗಾಗಿ ಮೊಸಳೆಯ ಹೊಟ್ಟೆ ಕತ್ತರಿಸಿ ಬಾಲಕನನ್ನು ಹೊರಗೆ ತೆಗೆಯಲು ಸಜ್ಜಾಗಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಮೊಸಳೆಯನ್ನು ವಶಕ್ಕೆ ಪಡೆದಿದ್ದಾರೆ. ಸ್ನಾನಕ್ಕೆಂದು ನದಿಗೆ ತೆರಳಿದ್ದ ಬಾಲಕ ಅಂತರ್‌ ಸಿಂಗ್‌, ಈಜುತ್ತ ಈಜುತ್ತ ಆಳಕ್ಕೆ ತೆರಳಿರಬಹುದು ಅಂತಾ ಅಧಿಕಾರಿಗಳು ಶಂಕಿಸಿದ್ದಾರೆ.

ಬಾಲಕನನ್ನು ಮೊಸಳೆ ನುಂಗುತ್ತಿರುವುದನ್ನು ಸ್ಥಳೀಯರು ನೋಡಿರುವುದಾಗಿ ಹೇಳ್ತಿದ್ದಾರೆ. ಆದ್ರೆ ಮೊಸಳೆ ಬಾಲಕನನ್ನು ನುಂಗಿರುವುದು ಅನುಮಾನ ಎನ್ನುತ್ತಿದ್ದಾರೆ ಅಧಿಕಾರಿಗಳು. ಬಾಲಕ ನೀರು ಪಾಲಾಗಿರುವ ಶಂಕೆ ಅಧಿಕಾರಿಗಳಿಗೆ ಮೂಡಿದೆ. ಬಾಲಕನ ಪತ್ತೆಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ಕೂಡ ನಡೆದಿದೆ.

- Advertisement -

Related news

error: Content is protected !!