Tuesday, June 23, 2026
spot_imgspot_img
spot_imgspot_img

ಸ್ನಾನ ಮಾಡುತ್ತ ಬೈಕ್‌‌ನಲ್ಲಿ ತೆರಳಿದ ಇಬ್ಬರು ಯುವಕರು ಪೊಲೀಸ್ ವಶಕ್ಕೆ

- Advertisement -
- Advertisement -

ಇಬ್ಬರು ಯುವಕರು ಬೈಕ್‌‌ನಲ್ಲಿ ತೆರಳುತ್ತಿದ್ದ ವೇಳೆ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಇಬ್ಬರು ಯುವಕರನ್ನು ವಿವಿಧ ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಲ್ಲಂನಲ್ಲಿ ನಡೆದಿದೆ.

ಭರಣಿಕ್ಕಾವು ನಿವಾಸಿಗಳಾದ ಅಜ್ಮಲ್ ಮತ್ತು ಬಾದುಷಾ ಮಳೆಯ ನಡುವೆಯೇ ಸಾಬೂನು ಹಚ್ಚಿಕೊಂಡು ಬೈಕ್ ಓಡಿಸಿದ್ದಾರೆ.

ಇನ್ನು ವೀಡಿಯೊ ವೈರಲ್ ಆದ ಬಳಿಕ ರಸ್ತೆಯಲ್ಲಿ ಅಪಾಯಕಾರಿ ಚಾಲನೆಯಲ್ಲಿ ತೊಡಗಿದ್ದಕ್ಕಾಗಿ ಪೊಲೀಸರು ಅವರಿಗೆ 5,000 ರೂ. ದಂಡ ವಿಧಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.

ಕ್ರೀಡಾಕೂಟ ಮುಗಿಸಿಕೊಂಡು ಬರುತ್ತಿದ್ದು, ಮಳೆ ಬರುತ್ತಿದ್ದರಿಂದ ಮೋಜಿಗಾಗಿ ಸವಾರಿ ಮಾಡುತ್ತಿದ್ದು ಸ್ನಾನಕ್ಕೆ ಯತ್ನಿಸಿರುವುದಾಗಿ ಯುವಕರು ಪೊಲೀಸರಿಗೆ ತಿಳಿಸಿದ್ದಾರೆ.

- Advertisement -

Related news

error: Content is protected !!