Friday, May 17, 2024
spot_imgspot_img
spot_imgspot_img

ಸ್ನೇಹಿತನ ಪತ್ನಿಯ ಮೇಲೆ ಕಣ್ಣು; ಪ್ರಶ್ನಿಸಿದ್ದಕ್ಕೆ ಕೊಲೆಯಾದ ಸಮಾಜ ಸೇವಕ

- Advertisement -G L Acharya panikkar
- Advertisement -

ಅವರಿಬ್ಬರೂ ಆಪ್ತ ಸ್ನೇಹಿತರು, ಒಂದೇ ಕಾಲೋನಿಯಲ್ಲಿ ವಾಸವಾಗಿದ್ದರು. ಆದರೆ ಈಗ ಇವರಿಬ್ಬರ ನಡುವೆ ವೈಶಮ್ಯ ಮೂಡಿ ಘೋರ ಅಂತ್ಯ ಕಂಡಿದೆ. ಇವರ ಮಧ್ಯ ವೈಶಮ್ಯಕ್ಕೆ ಕಾರಣ ದೂರ್ತ ಬುದ್ದಿ, ಸ್ನೇಹಿತನ ಮಡದಿಯ ಮೇಲೆ ಸ್ನೇಹಿತನೇ ಕಣ್ಣ ಹಾಕಿದ್ದಾನೆ. ಇದರ ಪರಿಣಾಮ ಮಾತ್ರ ದುರಂತ.

ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಪ್ರಶಾಂತ್ ನಾರ್ವೇಕರ್ ಮತ್ತು ಮಾರುತಿ ಇಬ್ಬರು ಸ್ನೇಹಿತರು ವಾಸವಾಗಿದ್ದರು. ಇಬ್ಬರು ಒಬ್ಬರ ಮನೆಗೆ ಒಬ್ಬರು ಹೋಗಿ ಬಂದು ಮಾಡುತ್ತಿದ್ದರು. ಇದು ಹೀಗೆ ಮುಂದುವರೆದಿತ್ತು. ಸಮಾಜ ಸೇವಕನಾದ ಮಾರುತಿ 15 ವರ್ಷಗಳ ಹಿಂದೆ ಸುಪ್ರೀಯಾ ಎಂಬುವರನ್ನು ಮದುವೆಯಾಗಿದ್ದಾನೆ. ಮದುವೆ ನಂತರವೂ ಇಬ್ಬರು ಸ್ನೇಹಿತನ ಮನೆಗೆ ಹೋಗಿ ಬಂದು ಮಾಡುತ್ತಿದ್ದನು. ಇದು ಇಷ್ಟು ದಿನಗಳ ಕಾಲ ಚಿನ್ನಾಗಿಯೇ ಇತ್ತು. ಆದರೆ 4 ವರ್ಷಗಳ ಹಿಂದೆ ಇದು ಬೇರೆ ಸ್ವರೂಪ ಪಡೆಯಿತು.

ಕಳೆದ 4 ವರ್ಷಗಳಿಂದ ಪ್ರಶಾಂತ್ ಸ್ನೇಹಿತ ಮಾರುತಿ ಪತ್ನಿ ಸುಪ್ರೀಯಾ ಮೇಲೆ ಕಣ್ಣಾಕಿದ್ದಾನೆ. ಇಷ್ಟೇ ಅಲ್ಲದೇ ಜತೆಗೆ ಆಕೆಗೆ ಕ್ರಮೇಣ ಬ್ಲ್ಯಾಕ್ ಮೇಲ್ ಮಾಡುತ್ತಾ ಬಂದಿದ್ದಾನೆ. ಈ ವಿಚಾರ ಆರಂಭದಲ್ಲಿ ಸುಪ್ರೀಯಾ ಮುಚ್ಚಿಟ್ಟಿದ್ದಾಳೆ. ಆದರೆ ದಿನಗಳು ಕಳೆದಂತ ಪ್ರಶಾಂತನ ಕಿರಿಕಿರಿ ಜಾಸ್ತಿಯಾದಾಗ ವರ್ಷದ ಹಿಂದೆ ಒಮ್ಮೆ ತನ್ನ ಪತಿ ಮಾರುತಿ ಬಳಿ ವಿಷಯ ಹೇಳಿದ್ದಾಳೆ. ಈ ವೇಳೆ ಹಿರಿಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಪ್ರಶಾಂತ್ ತಪ್ಪೊಪ್ಪಿಕೊಂಡು ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದಿದ್ದನು.

ಇದಾದ ಬಳಿಕ ಕೆಲ ದಿನಗಳ ಕಾಲ ಸುಮ್ಮನಿದ್ದ ಪ್ರಶಾಂತ್ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದನು. ಎರಡು ದಿನದ ಹಿಂದೆ ಮತ್ತೆ ಸುಪ್ರೀಯಾಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಈ ವಿಷಯವನ್ನು ಗಂಡನ ಮುಂದೆ ಸುಪ್ರೀಯಾ ಹೇಳಿಕೊಂಡಿದ್ದಾಳೆ. ಇದರಿಂದ ನಿನ್ನೆ (ಅ. 30) ರಾತ್ರಿ ಪ್ರಶಾಂತ್ ಮಾರುತಿಯನ್ನು ಬಿಡುವುದಿಲ್ಲವೆಂದು ಮಾರುತಿ ಮನೆ ಬಳಿಗೆ ಹೋಗಿದ್ದಾನೆ.

ಅಷ್ಟೊತ್ತಿಗೆ ಮಾರುತಿ ರಾತ್ರಿ ಊಟ ಮುಗಿಸಿಕೊಂಡು ವಾಕಿಂಗ್ ಅಂತಾ ತನ್ನ ಮನೆಯ ಮುಂದಿನ ಓಣಿಗೆ ಹೋಗಿದ್ದಾನೆ. ಈ ವೇಳೆ ಪ್ರಶಾಂತ್, ಮಾರುತಿ ಜತೆಗೆ ಜಗಳಕ್ಕಿಳಿದು ಮನೆಯ ಮುಂಭಾಗದಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳು ಆರಂಭಿಸಿದ್ದಾರೆ. ಈ ವೇಳೆ ಮನೆ ಮುಂದೆ ಇದ್ದ ಇಟ್ಟಿಗೆಗಳಿಂದ ಬಡಿದಾಡಕೊಳ್ಳಲಾರಂಭಿಸಿದ್ದಾರೆ. ಈ ವೇಳೆ ಪ್ರಶಾಂತ್ ಮನೆ ಮುಂದೆ ನಿಂತಿದ್ದ ಗೂಡ್ಸ್ ವಾಹನದ ಮೇಲೆಯೂ ಇಟ್ಟಿಗೆಗಳು ಬಿದ್ದು ವಾಹನದ ಗಾಜು ಕೂಡ ಪುಡಿ ಪುಡಿಯಾಗಿದೆ. ಇತ್ತ ಜಗಳ ವಿಕೋಪಕ್ಕೆ ತಿರುಗಿ ಪ್ರಶಾಂತ್, ಮಾರುತಿಯನ್ನು ಚಾಕುವಿನಿಂದ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಕುಟುಂಬಸ್ಥರು ಹಾಗೂ ಮಾರುತಿ ಸ್ನೇಹಿತರು ಕೂಡಲೇ ಖಾನಾಪುರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದರು. ಇಂದು (ಅ.31) ಮಧ್ಯಾಹ್ನದ ವೇಳೆಗೆ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು ಕುಟುಂಬಸ್ಥರ ಆಕ್ರಂದನದ ನಡುವೆ ಅಂತ್ಯಸಂಸ್ಕಾರ ನೆರವೇರಿದೆ. ಇತ್ತ ಕೊಲೆ ಮಾಡಿದ ಪ್ರಶಾಂತ್​​ನನ್ನು ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.

ಇದೀಗ ಮಾರುತಿ ಪತ್ನಿ ಎರಡು ಮಕ್ಕಳು ಅನಾಥವಾಗಿದ್ದರೇ, ಪ್ರಶಾಂತ್ ಎರಡು ತಿಂಗಳ ಹಿಂದೆ ಮದುವೆಯಾಗಿದ್ದು ಆತನ ಹೆಂಡತಿ ಕೂಡ ಇದೀಗ ಅನಾಥವಾಗಿದ್ದಾಳೆ. ಕುಳಿತು ಮಾತನಾಡಿ ಬಗೆ ಹರಿಸಿಕೊಳ್ಳಬೇಕಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ದುರ್ದೈವ.

- Advertisement -

Related news

error: Content is protected !!